ನಮ್ಮ ಜಾಗ ರಾಮ ಮಂದಿರಕ್ಕೆ ಹಸ್ತಾಂತರ: ಶಿಯಾ ಮಂಡಳಿ

Published : Aug 31, 2019, 08:50 AM ISTUpdated : Aug 31, 2019, 09:13 AM IST
ನಮ್ಮ ಜಾಗ ರಾಮ ಮಂದಿರಕ್ಕೆ ಹಸ್ತಾಂತರ: ಶಿಯಾ ಮಂಡಳಿ

ಸಾರಾಂಶ

ನಮ್ಮ ಜಾಗ ರಾಮ ಮಂದಿರಕ್ಕೆ ಹಸ್ತಾಂತರ: ಶಿಯಾ ಮಂಡಳಿ| ಶಿಯಾ ವಕ್ಫ್ ಮಂಡಳಿಯ ಪರ ವಕೀಲ ಎಂ.ಸಿ ಧಿಂಗ್ರಾ, ಹಿಂದೂ ಮಹಾಸಭಾ ಮಾಡಿದ ಅಭಿಪ್ರಾಯಗಳಿಗೆ ತನ್ನ ಆಕ್ಷೇಪ ಇಲ್ಲ 

ನವದೆಹಲಿ[ಆ.31]: ಮಹತ್ವದ ಬೆಳವಣಿಗೆಯೊಂದರಲ್ಲಿ, ಅಯೋಧ್ಯೆಯಲ್ಲಿನ ವಿವಾದಿತ ಬಾಬ್ರಿ ಮಸೀದಿ- ರಾಮಮಂದಿರ ಜಾಗದಲ್ಲಿ ತಮ್ಮ ಪಾಲಿಗೆ ಬಂದಿರುವ ಜಾಗವನ್ನು ಹಿಂದೂ ಸಂಘಟನೆಗಳಿಗೆ ಬಿಟ್ಟುಕೊಡಲು ಸಿದ್ಧ ಎಂದು ಉತ್ತರಪ್ರದೇಶದ ಶಿಯಾ ವಕ್ಫ್ ಮಂಡಳಿಯ ಘೋಷಿಸಿದೆ.

ವಿವಾದ ಕುರಿತು ನಡೆಯುತ್ತಿರುವ ನಿತ್ಯ ವಿಚಾರಣೆ ವೇಳೆ ಶುಕ್ರವಾರ ವಾದ ಮಂಡಿಸಿದ ಶಿಯಾ ವಕ್ಫ್ ಮಂಡಳಿಯ ಪರ ವಕೀಲ ಎಂ.ಸಿ ಧಿಂಗ್ರಾ, ಹಿಂದೂ ಮಹಾಸಭಾ ಮಾಡಿದ ಅಭಿಪ್ರಾಯಗಳಿಗೆ ತನ್ನ ಆಕ್ಷೇಪ ಇಲ್ಲ ಎಂದು ಹೇಳಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಮೊಘಲ್ ವಂಶಸ್ಥನಿಂದ ಚಿನ್ನದ ಇಟ್ಟಿಗೆ!

ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ಮೊಘಲರ ರಾಜ ಬಾಬರ್‌ ಸೇನೆಯ ಕಮಾಂಡರ್‌ ಆಗಿದ್ದ ಮೀರ್‌ ಬಾಕಿ ನಿರ್ಮಿಸಿದ್ದ. ಆತನೇ ಮಸೀದಿಯ ಮೊದಲ ಉಸ್ತುವಾರಿಯಾಗಿದ್ದ. ಜೊತೆಗೆ ಅಲಹಾಬಾದ್‌ ಹೈಕೋರ್ಟ್‌ ಅಯೋಧ್ಯೆಯಲ್ಲಿನ ವಿವಾದಿತ 2.77 ಎಕರೆ ಜಾಗವನ್ನು ಮೂರು ಭಾಗವಾಗಿ ವಿಂಗಡಿಸಿ ಅದರಲ್ಲಿ ಒಂದು ಭಾಗವನ್ನು ಮುಸ್ಲಿಮರಿಗೆ ನೀಡಿದೆಯೇ ಹೊರತೂ ಸುನ್ನಿ ವಕ್ಫ್ ಮಂಡಳಿಗಲ್ಲ. ಹೀಗಾಗಿ ಶಿಯಾ ವಕ್ಫ್ ಮಂಡಳಿಗೆ ಸೇರಿದ ಜಾಗವನ್ನು ಹಿಂದೂಗಳಿಗೆ ನೀಡಲು ಸಿದ್ಧ ಎಂದು ಮಾಹಿತಿ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
India Latest News Live:ಇಂಡಿಗೋ ಏರ್‌ಲೈನ್ಸ್ ಸಮಸ್ಯೆ ತನಿಖೆಗೆ 4 ಸದಸ್ಯರ ತಂಡ ರಚಿಸಿದ ಕೇಂದ್ರ ಸರ್ಕಾರ