'ಅಶ್ಲೀಲ ಆಡಿಯೋ ನನ್ನ ವಿರುದ್ಧದ ಷಡ್ಯಂತ್ರ, ಆ ಧ್ವನಿ ನನ್ನದಲ್ಲ, ಮಿಮಿಕ್ರಿ ಮಾಡಿದಂತಿದೆ'

Published : Jul 10, 2019, 11:27 AM IST
'ಅಶ್ಲೀಲ ಆಡಿಯೋ ನನ್ನ ವಿರುದ್ಧದ ಷಡ್ಯಂತ್ರ, ಆ ಧ್ವನಿ ನನ್ನದಲ್ಲ, ಮಿಮಿಕ್ರಿ ಮಾಡಿದಂತಿದೆ'

ಸಾರಾಂಶ

ಅಶ್ಲೀಲ ಆಡಿಯೋ ನನ್ನ ವಿರುದ್ಧದ ಷಡ್ಯಂತ್ರ: ವಿಶ್ವನಾಥ್‌| ‘ಆ ಧ್ವನಿ ನನ್ನದಲ್ಲ, ಮಿಮಿಕ್ರಿ ಮಾಡಿದಂತಿದೆ’| ಶಾಸಕತ್ವಕ್ಕೆ ರಾಜೀನಾಮೆ ನೀಡಿದ್ದಕ್ಕೆ ಯಾರೋ ಹೀಗೆ ಮಾಡಿದ್ದಾರೆ

ಬೆಂಗಳೂರು[ಜು.10]: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಅಶ್ಲೀಲ ಆಡಿಯೋ ಮಿಮಿಕ್ರಿ ಇದ್ದಂತೆ ಇದ್ದು, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಷಡ್ಯಂತ್ರ ರೂಪಿಸಿ ತಮ್ಮ ತೇಜೋವಧೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಜೆಡಿಎಸ್‌ನ ಮಾಜಿ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಸ್ಪಷ್ಟಪಡಿಸಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿ ಅತೃಪ್ತ ಶಾಸಕರೊಂದಿಗೆ ವಾಸ್ತವ್ಯ ಹೂಡಿರುವ ಅವರು ಮಂಗಳವಾರ ಅಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾರಣ ನಮ್ಮ ಪಕ್ಷದವರು, ಬೇರೆ ಪಕ್ಷದವರು ಅಥವಾ ನನಗಾಗದವರು ಈ ಕೆಲಸ ಮಾಡಿರಬೇಕು. ಆಡಿಯೋ ಸಂಭಾಷಣೆಯು ಮಿಮಿಕ್ರಿ ಇದ್ದಂತೆ ಇದೆ. ಇಂತಹ ಸಮಯದಲ್ಲಿ ಇದೆಲ್ಲಾ ಸಹಜ. ಆಧುನಿಕ ತಂತ್ರಜ್ಞಾನದಲ್ಲಿ ಏನು ಬೇಕಾದರೂ ಮಾಡಬಹುದು. ಅದನ್ನೆಲ್ಲಾ ನಾನು ಗಂಭೀರವಾಗಿ ಪರಿಗಣಿಸುವುದಿಲ್ಲ. ನಾನು ಏನು ಎಂಬುದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಹೇಳಿದರು.

ಆಡಿಯೋದ ಕೊನೆಯಲ್ಲಿ ಇಂಥವರು ಮಂತ್ರಿಯಾಗಬೇಕಾ ಎಂದು ಹೇಳಿದ್ದಾರೆ. ಇದನ್ನು ಗಮನಿಸಿದರೆ ದುರುದ್ದೇಶದಿಂದ ಯಾರೋ ಷಡ್ಯಂತ್ರ ರೂಪಿಸುವುದು ಸ್ಪಷ್ಟವಾಗಿ ಕಾಣುತ್ತದೆ. ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ. ರಾಜಕೀಯದಲ್ಲಿ ಬೆಳವಣಿಗೆಗಳು ನಡೆಯುತ್ತಿರುವ ಸಮಯದಲ್ಲಿ ಇಂಥದ್ದೆಲ್ಲಾ ಹುಟ್ಟುಹಾಕುತ್ತಾರೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇದೇ ಮೊದಲ ಬಾರಿಗೆ ಅತೀ ದುಬಾರಿಯಾದ ಬೆಳ್ಳಿ, ಚಿನ್ನಕ್ಕಿಂತ ವೇಗದಲ್ಲಿ ಸಾಗುತ್ತಿದೆ ಸಿಲ್ವರ್
ರಾಜ್ಯದ ತಾಪಮಾನ 12°Cಗೆ ಕುಸಿತ-ಕರುನಾಡಿಗೆ ಶೀತ ಕಂಟಕ ಖಚಿತ-ಬೆಂಗಳೂರು ಜನತೆಗೆ ಮೈನಡುಕ ಉಚಿತ!