
ನವದೆಹಲಿ(ಫೆ.20): ಸಾಮಾನ್ಯ ಜನರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅನುಕೂಲ ಮಾಡಿಕೊಟ್ಟಿದೆ. ಇಂದಿನಿಂದ ವಾರಕ್ಕೆ 50 ಸಾವಿರ ರೂ. ವಿತ್ ಡ್ರಾ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಗ್ರಾಹಕರಲ್ಲಿ ಕೊಂಚ ಸಂತಸ ಮೂಡಿದೆ. ಜೊತೆಗೆ ಮಾರ್ಚ್ 13ರಿಂದ ನಗದು ಹಿಂಪಡೆಯಲು ಯಾವುದೇ ಮಿತಿಯಿಲ್ಲ.
ನಿನ್ನೆವರೆಗೂ ವಾರಕ್ಕೆ 24 ಸಾವಿರ ರೂ. ಹಿಂಪಡೆಯುವ ಮಿತಿಯನ್ನು 50 ಸಾವಿರ ವಿಸ್ತರಿಸಲಾಗಿದೆ. ಮಾರ್ಚ್ 13ರಿಂದ ಎಟಿಎಂ ವಿತ್ ಡ್ರಾ ಮಿತಿ ಇರಲ್ಲ. ಎಟಿಎಂನಿಂದ ಎಷ್ಟು ಬೇಕಾದರೂ ಹಣ ಪಡೆಯಬಹುದು.
2016ರ ನವೆಂಬರ್ 8ರಂದು 500 ಹಾಗೂ 1 ಸಾವಿರ ರೂ ನೋಟು ಬ್ಯಾನ್ ಆದ ಬಳಿಕ ಬ್ಯಾಂಕ್ ಹಾಗೂ ಎಟಿಎಂ ವಿತ್ ಡ್ರಾ ಮಿತಿಗಳಿಗೆ ಕಡಿವಾಣ ಹಾಕಿತ್ತು. ಆರಂಭದಲ್ಲಿ ಎಟಿಎಂನಿಂದ ಕೇವಲ 2,500 ರೂ. ವಿತ್ ಡ್ರಾಗೆ ಅವಕಾಶ ಇತ್ತು. ನಂತರ 4,500 ವಿತ್ ಡ್ರಾ ಮಾಡಬಹುದಿತ್ತು. ಕೆಲ ದಿನಗಳ ಹಿಂದೆ ಅಷ್ಟೆ ಎಟಿಎಂಗಳಿಂದ 24 ಸಾವಿರ ವಿತ್ ಡ್ರಾ ಮಾಡಲು ಆರ್‌ಬಿಐ ಅವಕಾಶ ಮಾಡಿಕೊಟ್ಟಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.