
ನವದೆಹಲಿ(ಡಿ.05): ಪೂರ್ವ ದೆಹಲಿಯ ಬ್ಯಾಂಕ್ ಹಾಗೂ ಎಟಿಎಂ ಒರಗೆ 'ನೋ ಕ್ಯಾಷ್' ಎಂಬ ಸಂದೇಶ ಕಂಡು ಹತಾಶರಾದ ನಿವಾಸಿಗಳು ಭಾನುವಾರದಂದು ಎಟಿಎಂಗಳ 'ಪೂಜೆ' ಮಾಡುವ ಕಾರ್ಯವನ್ನು ಆರಂಭಿಸಿದ್ದಾರೆ. ಈ ಪೂಜೆಯ ವೇಳೆ ಎಟಿಎಂನಲ್ಲಿ ಹಣವಿರಲಿ ಎಂಬ ಪ್ರಾರ್ಥನೆ ಸಲ್ಲಿಸಿದ್ದಾರೆ.
ದೆಹಲಿಯ ಜಗತ್'ಪುರಿ ಇಲಾಖೆಯ ಸುಮಾರು 50 ಕ್ಕೂ ಅಧಿಕ ಮಂದಿ ಸೇರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ೆಟಿಎಂ ಮಷೀನ್'ಗಳಿಗೆ ಈ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕುರಿತಾಗಿ ಮಾತನಾಡಿದ ವ್ಯಕ್ತಿಯೊಬ್ಬರು 'ಕೇಂದ್ರ ಜಾರಿಗೊಳಿಸಿದ ನೋಟ್ ಬ್ಯಾನ್ ಬಳಿಕ ಜನರು ಪರದಾಡುತ್ತಿರುವುದನ್ನು ಕಂಡು, ಅವರ ಸಮಸ್ಯೆ ನಿವಾರಣೆಯಾಗಲಿ ಎಂಬ ಆಶಯದೊಂದಿಗೆ ನಾವು ಈ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಿದ್ದೇವೆ' ಎಂದಿದ್ದಾರೆ.
ಇನ್ನು ಇದೇ ವಿಚಾರವಾಗಿ ಮಾತನಾಡಿದ ಪುನೀತ್ ತಿವಾರಿ 'ಈವರೆಗೆ ವೃದ್ಧರು ಹಾಗೂ ತಯವಕ ಯುವತಿಯರು ವಾಕಿಂಗ್ ಮಾಡುತ್ತಿರುವುದನ್ನು ನೋಡುತ್ತಿದ್ದೆ. ಆದರೆ ನೋಟ್ ಬ್ಯಾನ್ ಬಳಿಕ ಜನರು ಎಟಿಎಂಗಾಗಿ ಸುತ್ತಾಡುವುದು ಸಾಮಾನ್ಯವಾಗಿದೆ' ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.