
ಮುಂಬೈ: ಸರಿಯಾಗಿ ಅಡುಗೆ ಮಾಡು ಎಂದು ಪತ್ನಿಗೆ ಹೇಳುವುದು ದೌರ್ಜನ್ಯವಲ್ಲ ಎಂದು ಬಾಂಬೆ ಹೈಕೋರ್ಟ್ ತೀರ್ಪೊಂದರಲ್ಲಿ ತಿಳಿಸಿದೆ.
ಸಾಂಗ್ಲಿ ನಿವಾಸಿ ವಿಜಯ್ ಶಿಂದೆ ಎಂಬಾತ 1998ರಲ್ಲಿ ವಿವಾಹವಾಗಿದ್ದು, ಆತನ ಪತ್ನಿ 2001ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಅಡುಗೆ ಸರಿಯಾಗಿ ಮಾಡಿಲ್ಲ ಎಂಬ ಕಾರಣಕ್ಕೆ ಜಗಳ ನಡೆದ ಬಳಿಕ, ಆತ್ಮಹತ್ಯೆಗೆ ಶರಣಾಗಿದ್ದಳು.
ಸರಿಯಾಗಿ ಅಡುಗೆ ಮಾಡು ಎಂದು ಹೇಳುವುದು ದೌರ್ಜನ್ಯವಲ್ಲ ಎಂದ ಕೋರ್ಟ್ ಆರೋಪಿಯನ್ನು ಖುಲಾಸೆಗೊಳಿಸಿದೆ.