ಜೈ ಶ್ರೀರಾಮ್ ಅನ್ನಲ್ಲ, ವಂದೇ ಮಾತರಂ ಕೂಗಲ್ಲ: ಒವೈಸಿ!

By Web DeskFirst Published Jun 30, 2019, 8:07 PM IST
Highlights

ಜೈಶ್ರೀರಾಮ್ ಘೋಷಣೆ ಕೂಗಲ್ಲ ಎಂದ ಅಸದುದ್ದೀನ್ ಒವೈಸಿ| ವಂದೇ ಮಾತರಂ ಹೇಳಲ್ಲ ಎಂದ ಹೈದರಾಬಾದ್ ಸಂಸದ| ‘ಭಾರತೀಯ ಮುಸ್ಲಿಮರಲ್ಲಿ ಭಯ ಹುಟ್ಟಿಸುವ ಹುನ್ನಾರ’| ‘ಧಾರ್ಮಿಕ ಘೋಷಣೆ ಕೂಗಲು ನಿರಾಕರಿಸುವ ಮುಸ್ಲಿಮರ ಮೇಲೆ ದಾಳಿ’| ‘RSS ಮತ್ತು ಬಿಜೆಪಿ ಅಣತಿ ಮೇರೆಗೆ ಮುಸ್ಲಿಮರ ಮೇಲೆ ದಾಳಿ’| ಗಂಭೀರ ಆರೋಪ ಮಾಡಿದ ಎಐಎಂಐಎಂ ಮುಖ್ಯಸ್ಥ| 

ಹೈದರಾಬಾದ್(ಜೂ.30): ಯಾವುದೇ ಕಾರಣಕ್ಕೂ ತಾವು ಜೈ ಶ್ರೀರಾಮ್ ಮತ್ತು ವಂದೇ ಮಾತರಂ ಘೋಷಣೆ ಕೂಗುವುದಿಲ್ಲ ಎಂದು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಜೈ ಶ್ರೀರಾಮ್ ಮತ್ತು ವಂದೇ ಮತರಂ ಘೋಷಣೆಗಳ ಮೂಲಕ, ಭಾರತೀಯ ಮುಸಲ್ಮಾನರಲ್ಲಿ ಭಯ ಹುಟ್ಟಿಸುವ ಷಡ್ಯಂತ್ರ ನಡೆದಿದೆ ಎಂದು ಒವೈಸಿ ಆರೋಪಿಸಿದ್ದಾರೆ. 

AIMIM MP Asaduddin Owaisi: People are being beaten up if they do not raise slogans of JSR (Jai Shri Ram) & VM (Vande Mataram). Such incidents aren't going to stop. Only Muslims&Dalits are being targeted. There are orgs behind such incidents&all of them are linked to Sangh pariwar pic.twitter.com/GCV26YMENW

— ANI (@ANI)

ಜೈಶ್ರೀರಾಮ್ ಹಾಗೂ ವಂದೇ ಮಾತರಂ ಘೋಷಣೆಯನ್ನು ಯಾರೂ ಬೇಕಾದರೂ ಹೇಳಲಿ, ಆದರೆ ಅದನ್ನು ಹೇಳುವಂತೆ ಮುಸ್ಲಿಮರ ಮೇಲೆ ಒತ್ತಡ ಹೇರುತ್ತಿರುವುದು ನಿಜಕ್ಕೂ ಆಘಾತಕಾರಿ ಬೆಳವಣಿಗೆ ಎಂದು ಒವೈಸಿ ಅಭಿಪ್ರಾಯಪಟ್ಟಿದ್ದಾರೆ.

ಧಾರ್ಮಿಕ ಘೋಷಣೆ ಕೂಗಲು ನಿರಾಕರಿಸುವ ಕಾರಣಕ್ಕೆ ಮುಸ್ಲಿಮರ ವಿರುದ್ಧ ದ್ವೇಷ ಹರಡಲಾಗುತ್ತಿದ್ದು, ಇದು RSS ಮತ್ತು ಬಿಜೆಪಿಯ ಅಣತಿ ಮೇರೆಗೆ ನಡೆಯುತ್ತಿದೆ ಎಂದು ಒವೈಸಿ ಗಂಭೀರ ಆರೋಪ ಮಾಡಿದ್ದಾರೆ.
 

click me!