ಅರುಣ್ ಜೇಟ್ಲಿ ಕ್ಷಮೆಯಾಚಿಸಿದ ದಿಲ್ಲಿ ಸಿಎಂ ಕೇಜ್ರಿವಾಲ್

By Suvarna Web DeskFirst Published Apr 2, 2018, 2:51 PM IST
Highlights

10 ಕೋಟಿ ರೂ. ಮೌಲ್ಯದ ಮಾನನಷ್ಟ ಮೊಕದ್ದಮೆ ಹಿಂಪಡೆಯುವಂತೆ ಆಗ್ರಹಿಸಿ, ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ ಇದೀಗ ಒಬ್ಬೊಬ್ಬರ ಕ್ಷಮೆಯಾಚಿಸುತ್ತಿದ್ದು, ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಕ್ಷಮೆಯನ್ನೂ ಯಾಚಿಸಿದ್ದಾರೆ.

ಹೊಸದಿಲ್ಲಿ: 10 ಕೋಟಿ ರೂ. ಮೌಲ್ಯದ ಮಾನನಷ್ಟ ಮೊಕದ್ದಮೆ ಹಿಂಪಡೆಯುವಂತೆ ಆಗ್ರಹಿಸಿ, ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ ಇದೀಗ ಒಬ್ಬೊಬ್ಬರ ಕ್ಷಮೆಯಾಚಿಸುತ್ತಿದ್ದು, ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಕ್ಷಮೆಯನ್ನೂ ಯಾಚಿಸಿದ್ದಾರೆ.

ಕೇಜ್ರಿವಾಲ್ ಅವರೊಂದಿಗೆ ಆಮ್ ಆದ್ಮಿ ಪಕ್ಷದವರಾದ ಸಂಜಯ್ ಸಿಂಗ್, ರಾಘವ್ ಚಡ್ಡಾ ಮತ್ತು ಅಶುತೋಶ್ ಸಹ ಜೇಟ್ಲಿ ಕ್ಷಮೆಯಾಚಿಸಿದ್ದಾರೆ.  ಈ ನಾಲ್ವರೂ ಜಂಟಿ ಪತ್ರ ಪರೆದಿದ್ದಾರೆ.

ಅರುಣ್ ಜೇಟ್ಲಿ ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಘಟನೆಯ ಅಧ್ಯಕ್ಷರಾಗಿದ್ದಾಗ ಅಪಾರ ಮೊತ್ತದ ಅವ್ಯವಹಾರ ನಡೆಸಿದ್ದರೆಂದು ಕೇಜ್ರಿವಾಲ್ ಸೇರಿ ಇತರರು ಆರೋಪಿಸಿದ್ದರು. ಇದೀಗ ಈ ಆರೋಪ ಸತ್ಯಕ್ಕೆ ದೂರವಾಗಿದ್ದು, ಆರೋಪಿಸಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ. ಇವರ ವಿರುದ್ಧ ಹಾಕಿರುವ ಮಾನನಷ್ಟ ಪ್ರಕರಣವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.

Delhi CM Arvind Kejriwal, AAP leaders Sanjay Singh,Ashutosh and Raghav Chadha apologize to Union Finance Minister Arun Jaitley in the defamation case he had filed against them pic.twitter.com/CJFqxVD738

— ANI (@ANI)

ಹಲವರ ವಿರುದ್ಧ ಕೇಜ್ರಿವಾಲ್ ಆರೋಪಗೈದಿದ್ದು, ಇದೀಗ ಒಬ್ಬರಾದ ನಂತರ ಮತ್ತೊಬ್ಬರ ಕ್ಷಮೆಯಾಚಿಸುತ್ತಿದ್ದಾರೆ. ಈ ಮೊದಲು ಕೇಂದ್ರ ಸಚಿವ ನಿತಿನ್ ಗಡ್ಕರಿ, ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಹಾಗೂ ಅಕಾಲಿ ದಳ ನಾಯಕ ಬಿಕ್ರಿಮ್ ಸಿಂಗ್ ಮುಜಿತಿಯಾ ಅವರಿಂದೂ ಕ್ಷಮೆಯಾಚಿಸಿದ್ದು, ಮಾನನಷ್ಟ ಪ್ರಕರಣಗಳನ್ನು ಹಿಂಪಡೆಯುವಂತೆ ಆಗ್ರಹಿಸಿದ್ದರು.
 

click me!