ಬಡ್ತಿಗಾಗಿ ಬಕೆಟ್ ಹಿಡಿಯುವ ಸೈನಿಕರಿಗೆ ಸೇನಾ ಮುಖ್ಯಸ್ಥ ವಾರ್ನಿಂಗ್!

First Published Jul 11, 2018, 8:15 PM IST
Highlights

ಬಡ್ತಿಗಾಗಿ ಬಕೆಟ್ ಹಿಡಯೋ ಸೈನಿಕರಿಗೆ ವಾರ್ನಿಂಗ್

ಎಚ್ಚರಿಕೆ ನೀಡಿದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್

ಸಿಎಸ್‌ಡಿ ಮದ್ಯ ಹೊರಗೆ ಮಾರುವ ಸೈನಿಕರೇ ಎಚ್ಚರ

ಬಡ್ತಿ, ವರ್ಗಾವಣೆ ಯಾವುದಕ್ಕೂ ಶಿಫಾರಸ್ಸು ಮಾಡುವಂತಿಲ್ಲ

ರಾವತ್ 37 ಅಂಶಗಳ ಪಟ್ಟಿಯಲ್ಲಿ ಏನೆನಿದೆ?   
 

ನವದೆಹಲಿ(ಜು.11): ಬಡ್ತಿ, ವರ್ಗಾವಣೆ ಸೇರಿದಂತೆ ಇನ್ನಿತರ ಶಿಫಾರಸ್ಸುಗಳನ್ನು ಮಾಡುವ ಸೈನಿಕರಿಗೆ ಭಾರತೀಯ ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಖಡಕ್ ಸಂದೇಶ ರವಾನಿಸಿದ್ದಾರೆ. ಈ ಕುರಿತು 37 ಅಂಶಗಳ ಪಟ್ಟಿ ಬಿಡುಗಡೆ ಮಾಡಿರುವ ಜನರಲ್ ಬಿಪಿನ್ ರಾವತ್, ಇವುಗಳನ್ನು ಮೀರುವ ಸೈನಿಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಎಚ್ಚರಿಕೆ ಕೂಡ ನೀಡಿದ್ದಾರೆ.

ಸೈನಿಕರಿಗಾಗಿ ಕೊಡಲಾಗುವ ಸಿಎಸ್ ಡಿ ಮದ್ಯವನ್ನು ಹೆಚ್ಚಿನ ದರಕ್ಕೆ ಮಾರುವ ಸೈನಿಕರಿಗೆ ಎಚ್ಚರಿಕೆ ಕೊಟ್ಟಿರುವ ಬಿಪಿನ್ ರಾವತ್, ಇಂತಹ ಯಾವುದೇ ಪ್ರಕರಣಗಳಲ್ಲಿ ಸೈನಿಕರಿಗೆ ಕ್ಷಮೆ ಇಲ್ಲ ಎಂದು ಹೇಳಿದ್ದಾರೆ.

ಅಲ್ಲದೇ ನಿರ್ದಿಷ್ಟ ಸ್ಥಳಕ್ಕೆ ವರ್ಗಾವಣೆಗೊಂಡ ಸೈನಿಕ ಯಾವುದೇ ಕಾರಣಕ್ಕೂ ವರ್ಗಾವಣೆ ರದ್ದತಿ ಕೋರಿ ಶಿಫಾರಸ್ಸು ಮಾಡುವಂತಿಲ್ಲ ಎಂದು ಸೇನಾ ಮುಖ್ಯಸ್ಥ ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ರೀತಿಯ ಶಿಫಾರಸ್ಸು ಮಾಡುವ ಸೈನಿಕರು ಯಾವುದೇ ಹುದ್ದೆಯಲ್ಲಿದ್ದರೂ ಅಂತವರ ವಿರುದ್ದ ಕಠಿಣ ಕ್ರಮ ಕಟ್ಟಿಟ್ಟ ಬುತ್ತಿ ಎಂದು ಅವರು ಎಚ್ಚರಿಸಿದ್ದಾರೆ.

ಭಾರತೀಯ ಸೇನೆ ಒಂದು ತಂಡವಾಗಿ ಭಾರತದ ಗಡಿಗಳನ್ನು ರಕ್ಷಣೆ ಮಾಡುತ್ತಿದ್ದು, ತಂಡದ ಶಿಸ್ತನ್ನು ಮೀರುವ ಯಾವುದೇ ಸೈನಿಕನಿಗೆ ಸೇನೆಯಲ್ಲಿ ಸ್ಥಾನವಿಲ್ಲ ಎಂದು ಬಿಪಿನ್ ರಾವತ್ ಕಠಿಣ ಶಬ್ದಗಳಲ್ಲಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

click me!