
ಬೆಂಗಳೂರು(ಸೆ.17): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ಅಧಿಕಾರಿಗಳ ತನಿಖೆ ತೀವ್ರಗೊಂಡಿದ್ದೆ.
ಗೌರಿ ಲಂಕೆಶ್ ಹತ್ಯೆಯಲ್ಲಿ ಸ್ಥಳೀಯ ರೌಡಿಗಳ ಕೈವಾಡವಿರಬಹುದು ಎಂಬ ಶಂಕೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಹಾಲಿ ರೌಡಿ ತನ್ವೀರ್'ನನ್ನ ವಿಚಾರಣೆಗೊಳಪಡಿಸಿದೆ. ವಿಚಾರಣೆ ವೇಳೆ ಗೌರಿ ಹತ್ಯೆಗೆ ಹಂತಕ ಬಳಸಿದ್ದು ಗನ್ ಎಲ್ಲಿಂದ ಸರಬರಾಜು ಆಗಿದೆ ಅನ್ನೋದನ್ನ ತನಿಖಾಧಿಕಾರಿಗಳ ಮುಂದೆ ರೌಡಿ ತನ್ವೀರ್ ಬಯಲು ಮಾಡಿದ್ದಾನೆ.
ಗೌರಿ ಹತ್ಯೆ ಮಾಡಲು ಹಂತಕರಿಗೆ ಬಿಜಾಪುರದಿಂದ ಗನ್ ರವಾನೆಯಾಗಿದೆ ಎಂಬ ಸ್ಪಷ್ಟ ಮಾಹಿತಿಯನ್ನ ಎಸ್ಐ'ಟಿ ಅಧಿಕಾರಿಗಳ ಮುಂದೆ ಬಯಲು ಮಾಡಿದ್ದಾನೆ. ತನ್ವೀರ್'ನಿಂದ ಮಾಹಿತಿ ಕಲೆ ಹಾಕಿದ್ದ ಎಸ್'ಐಟಿ ಅಧಿಕಾರಿಗಳು ಹಂತಕರ ಸುಳಿವನ್ನ ಹುಡುಕಿ ಬಿಜಾಪುರಕ್ಕೆ ತೆರಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.