
ಬಾಗಲಕೋಟೆ(ಮೇ.23): IAS ಅಧಿಕಾರಿ ಅನುರಾಗ್ ತಿವಾರಿ ಸಾವಿನ ಪ್ರಕರಣ ಹಲವು ಮಜಲುಗಳನ್ನು ದಾಟುತ್ತಿದೆ. ಈ ಹೊತ್ತಲ್ಲೇ ಮಾಜಿ ಸಿಎಂ ಯಡಿಯೂರಪ್ಪ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಅದೆಂಥಾ ಬಾಂಬ್? ಬಿಎಸ್ವೈ ಮಾತಿನ ಮರ್ಮ ಏನಿರಬಹುದು ಎನ್ನುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ರಾಜ್ಯದ ಐಎಎಸ್ ಅಧಿಕಾರಿಗಳ ಜೀವಕ್ಕೆ ಬೆಲೆ ಇಲ್ಲ. ಅಧಿಕಾರಿಗಳಿಗೆ ಜೀವ ಬೆದರಿಕೆ ಇದೆ ಅಂದ್ರೆ ರಾಜ್ಯಭಾರ ಅದು ಹೇಗೋ ಗೊತ್ತಿಲ್ಲ. ಆಹಾರ ಇಲಾಖೆ ಆಯುಕ್ತರಾಗಿದ್ದ ಅಧಿಕಾರಿ ಅನುರಾಗ್ ತಿವಾರಿ ಸಾವಿನ ಬಳಿಕ ಈ ಮಾತು ಯಡಿಯೂರಪ್ಪ ಆಡಿರುವುದು. ಈ ಹೊಸ ಬಾಂಬ್ ರಾಜ್ಯದಲ್ಲಿ ಮತ್ತೊಂದು ಸಂಚಲನ ಸೃಷ್ಟಿಸಿದೆ. ಆದರೆ, ಆ ಅಧಿಕಾರಿ ಯಾರು ಎನ್ನುವುದನ್ನು ಬಿಜೆಪಿ ರಾಜ್ಯಾಧ್ಯಕ್ಷರು ಬಹಿರಂಗ ಮಾಡಿಲ್ಲ.
ಈ ಹಿಂದಿನ ಕೆಲವು ಅಧಿಕಾರಿಗಳ ಸಾವಿನ ತನಿಖೆ ಸಮಪರ್ಕವಾಗಿ ನಡೆದಿಲ್ಲ ಎನ್ನುವುದು ಯಡಿಯೂರಪ್ಪರ ವಾದ. IAS ಅಧಿಕಾರಿ ಅನುರಾಗ್ ತಿವಾರಿ ಸಾವಿನಲ್ಲೂ ಪಾರದರ್ಶಕ ತನಿಖೆ ಆಗುತ್ತಿಲ್ಲ. ಆದ್ರೆ ಉತ್ತರ ಪ್ರದೇಶದ ಸರ್ಕಾರ ತಿವಾರಿ ಸಾವಿನ ಪ್ರಕರಣವನ್ನ ಸಿಬಿಐಗೆ ವಹಿಸಿರುವುದು ನೆಮ್ಮದಿ ತಂದಿದೆ ಅಂತಲೂ ಯಡಿಯೂರಪ್ಪ ಹೇಳಿದರು.
ಒಟ್ನಲ್ಲಿ ಅನುರಾಗ್ ತಿವಾರಿ ಸಾವು ಪ್ರಕರಣ ಸಿಬಿಐ ಹೆಗಲೇರಿದ ಮೇಲೆ ಯಡಿಯೂರಪ್ಪ ಮತ್ತಷ್ಟು ಆಕ್ಟೀವ್ ಆಗಿದ್ದಾರೆ. BSY ಹೇಳಿರುವ ಆ IAS ಅಧಿಕಾರಿ ಯಾರು? ಯಾವ ವಿಚಾರದಲ್ಲಿ ಯಾರಿಂದ ಜೀವಭಯ ಅನ್ನೋದು ಜನತೆ ಕೇಳುವಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.