ಆಂಧ್ರದಲ್ಲಿ ಪಟೇಲ್‌ಗಿಂತ ಎತ್ತರದ ಕಟ್ಟಡ!: ನೀಲನಕ್ಷೆ ಸಿದ್ಧ

By Web DeskFirst Published Nov 24, 2018, 12:08 PM IST
Highlights

 ಅಮರಾವತಿಯಲ್ಲಿ 250 ಮೀಟರ್‌ ಎತ್ತರದ ಗಗನಚುಂಬಿ ಕಟ್ಟಡದಲ್ಲಿ ವಿಧಾನಸಭೆ ಇರಲಿದ್ದು, ಇದು 182 ಮೀ. ಎತ್ತರ ಇರುವ ಸರ್ದಾರ್‌ ಪಟೇಲರ ಏಕತಾ ಪ್ರತಿಮೆಗಿಂತ 68 ಮೀ. ಹೆಚ್ಚು ಎತ್ತರದ್ದಾಗಲಿದೆ.

ವಿಜಯವಾಡ[ನ.24]: ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿಯಲ್ಲಿ ಭವ್ಯ ವಿಧಾನಸಭಾ ಕಟ್ಟಡ ತಲೆಯೆತ್ತಲಿದೆ. ಅಮರಾವತಿಯಲ್ಲಿ 250 ಮೀಟರ್‌ ಎತ್ತರದ ಗಗನಚುಂಬಿ ಕಟ್ಟಡದಲ್ಲಿ ವಿಧಾನಸಭೆ ಇರಲಿದ್ದು, ಇದು 182 ಮೀ. ಎತ್ತರ ಇರುವ ಸರ್ದಾರ್‌ ಪಟೇಲರ ಏಕತಾ ಪ್ರತಿಮೆಗಿಂತ 68 ಮೀ. ಹೆಚ್ಚು ಎತ್ತರದ್ದಾಗಲಿದೆ.

ವಿಧಾನಸಭಾ ಸಚಿವಾಲಯ ಕಟ್ಟಡದ ವಿವರಗಳನ್ನು ಗುರುವಾರ ಘೋಷಿಸಿದ ಚಂದ್ರಬಾಬು ನಾಯ್ಡು, ಮೂರು ಅಂತಸ್ತಿನ ಕಟ್ಟಡ ಇದಾಗಲಿದೆ. ಬ್ರಿಟನ್‌ ಮೂಲದ ವಾಸ್ತುಶಿಲ್ಪಿಯಿಂದ ನೀಲನಕ್ಷೆ ಬಹುತೇಕ ಅಂತಿಮವಾಗಿದ್ದು, ಸಣ್ಣಪುಟ್ಟಬದಲಾವಣೆಯೊಂದಿಗೆ ಸರ್ಕಾರಕ್ಕೆ ಶೀಘ್ರ ಸಲ್ಲಿಕೆಯಾಗಲಿದೆ ಎಂದರು. ಕಟ್ಟಡ ನಿರ್ಮಾಣಕ್ಕೆ ಮಾಸಾಂತ್ಯಕ್ಕೆ ಟೆಂಡರ್‌ ಕರೆಯಲಾಗುತ್ತಿದ್ದು, 2 ವರ್ಷದಲ್ಲಿ ನಿರ್ಮಾಣದ ಗುರಿ ಹೊಂದಲಾಗಿದೆ.

ಇದನ್ನೂ ಓದಿ: ವಾವ್...! ಬಾಹ್ಯಾಕಾಶದಿಂದ ಹೀಗೆ ಕಾಣುತ್ತೆ ಪಟೇಲರ 'ಏಕತಾ ಪ್ರತಿಮೆ'!

300 ಜನ ಹಾಗೂ 25 ಜನ ಕೂಡುವ 2 ಪ್ರತ್ಯೇಕ ಗ್ಯಾಲರಿಗಳು ವಿಧಾನಸಭೆಯಲ್ಲಿ ನಿರ್ಮಾಣವಾಗಲಿವೆ. ಇವುಗಳ ಮುಂದೆ ಗಾಜಿನ ಪರದೆ ಇರಲಿದೆ. ಜತೆಗೆ ಈ ಕಟ್ಟಡ ಭೂಕಂಪ ಹಾಗೂ ಚಂಡಮಾರುತ ನಿರೋಧಕವಾಗಲಿದೆ.

ಇದನ್ನೂ ಓದಿ: ಅಯೋಧ್ಯೆ: ಏಕತಾ ಪ್ರತಿಮೆಗಿಂತಲೂ ಎತ್ತರದ ರಾಮನ ಪ್ರತಿಮೆ?

ಎತ್ತರದ ಸಮರ:

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇತ್ತೀಚೆಗೆ 201 ಮೀಟರ್‌ ಎತ್ತರದ ರಾಮ ಪ್ರತಿಮೆ ನಿರ್ಮಾಣ ಘೋಷಿಸಿದ್ದರು. ಇತ್ತ ಕರ್ನಾಟಕ ಸರ್ಕಾರ 125 ಅಡಿ ಎತ್ತರದ ಕಾವೇರಿ ಮಾತೆಯ ಪ್ರತಿಮೆಯನ್ನು ಕಾವೇರಿ ನದಿಯಲ್ಲಿ ನಿರ್ಮಿಸುವ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ 250 ಅಡಿ ಎತ್ತರದ ಕಟ್ಟಡವನ್ನು ನಾಯ್ಡು ಘೋಷಿಸಿರುವುದು ‘ಎತ್ತರದ ಸಮರ’ಕ್ಕೆ ನಾಂದಿ ಹಾಡಿದೆ.

click me!