ಅಕ್ರಮ ಕಟ್ಟಡ ನಿರ್ಮಾಣ : ಮೋದಿಗೆ ನೋಟಿಸ್

First Published Jun 22, 2018, 1:14 PM IST
Highlights

ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿಗೆ ಅಹಮದಾಬಾದ್ ಮುನಿಸಿಪಲ್ ಕಾರ್ಪೋರೇಷನ್ ನೋಟಿಸ್ ಜಾರಿ ಮಾಡಿದೆ. 

ಅಹಮದಬಾದ್ : ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿಗೆ ಅಹಮದಾಬಾದ್ ಮುನಿಸಿಪಲ್ ಕಾರ್ಪೋರೇಷನ್ ನೋಟಿಸ್ ಜಾರಿ ಮಾಡಿದೆ. ರಾಬರಿ ಕಾಲೋನಿಯಲ್ಲಿ ಇರುವ ನ್ಯಾಯಬೆಲೆ ಅಂಗಡಿ ಪಕ್ಕದಲ್ಲೇ ಮತ್ತೊಂದು ಕಟ್ಟಡವನ್ನು ಅಕ್ರಮವಾಗಿ ನಿರ್ಮಾಣ ಮಾಡುತ್ತಿರುವ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ. 

ಪ್ರಹ್ಲಾದ್ ಮೋದಿಯವರಿಂದ ನಡೆಯುತ್ತಿರುವ ನಿರ್ಮಾಣ ಕಾರ್ಯವು ಅಕ್ರಮವಾಗಿದ್ದು, ನಿರ್ಮಾಣ ಕಾರ್ಯವನ್ನು ನಿಲ್ಲಿಸುವಂತೆ 2 ಬಾರಿ  ಸೂಚಿಸಲಾಗಿತ್ತು. ಆದರೆ ಅವರು ಕೆಲಸ ಮುಂದುವರಿಸಿದ್ದು ಈ ನಿಟ್ಟಿನಲ್ಲಿ ಈಗ ಮತ್ತೊಮ್ಮೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಆದರೆ ಈ ಸಂಬಂಧ ಪ್ರತಿಕ್ರಿಯೆ ನೀಡಿದ ಪ್ರಹ್ಲಾದ್ ಮೋದಿ ಅಲ್ಲಿಯೇ ಇದ್ದ ತಮ್ಮ ಕಟ್ಟಡವೊಂದು ಅತ್ಯಂತ ಹಳೆಯದಾಗಿತ್ತು. ಈ ಸಂಬಂಧ ಎಎಂಸಿ ಅಧಿಕಾರಿಗಳಿಗೆ ಪತ್ರ ಬರೆದು ಅದು ಅತ್ಯಂತ ಕಟ್ಟಡ ಎಂದು  ತೆರವಿಗೆ ಅವಕಾಶ ನೀಡಬೇಕು ಎಂದು ಕೇಳಿಕೊಂಡಿದ್ದೆ.

ಆದರೆ ಅಧಿಕಾರಿಗಳು ಮಾತ್ರ ಭೇಟಿ ನೀಡಲಿಲ್ಲ. ಆದರೆ ಆ ಕಟ್ಟಡ ಕೊನೆಗೂ ಉರುಳಿ ಬಿತ್ತು. ಬಳಿಕ ನೂತನ ಕಟ್ಟಡ ನಿರ್ಮಾಣ ಮಾಡಲು ಆರಂಭಿಸಿದ್ದು, ಈ ವೇಳೆ ಅಧಿಕಾರಿಗಳು ಅದು ಅಕ್ರಮ ನಿರ್ಮಾಣ ಎಂದು ನೊಟಿಸ್ ಜಾರಿ  ಮಾಡಿದರು.

ಅಕ್ರಮ ಸಕ್ರಮ ಅಡಿಯಲ್ಲಿ ಅದಕ್ಕೆ ಶುಲ್ಕವನ್ನು ಪಾವತಿಸಿ ಕಟ್ಟಡ ನಿರ್ಮಾಣ ಕಾರ್ಯವನ್ನು ಪುನಃ ಆರಂಭ ಮಾಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದೇ ಶುಲ್ಕವನ್ನು ಕಟ್ಟಿದ ಬಳಿಕವೂ ನೋಟಿಸ್  ಜಾರಿ ಮಾಡಿದ್ದಾರೆ ಎಂದು ಹೇಳಿದ್ದಾರೆ.  

click me!