
ಬೆಂಗಳೂರು(ಡಿ.26): ಸೊಂಪಾದ ಹೊಳೆಯುವ ಕೂದಲು ಹೊಂದಬೇಕು ಎನ್ನುವುದು ಪ್ರತಿಯೊಬ್ಬರ ಬಯಕೆಯಾಗಿರುತ್ತದೆ. ಆದರೆ ಆಧುನಿಕ ಜೀವನ ಜಂಜಾಟ, ಮಾಲಿನ್ಯ, ಒತ್ತಡಗಳು ಕೂದಲು ಉದರಲು ಮುಖ್ಯ ಕಾರಣವಾಗಿರುತ್ತದೆ.
ಆದರೆ ಇದಕ್ಕೆಲ್ಲಾ ಪರಿಹಾರವು ಇದ್ದೆ ಇರುತ್ತದೆ. ಸೊಂಪಾದ ಕೂದಲು ಬೆಳೆಯಲು ಈ ಆಹಾರಗಳು ನಿಮಗೆ ಸಹಕಾರಿಯಾಗಿರುತ್ತದೆ.
ಮೊಟ್ಟೆ : ಮೊಟ್ಟೆಯಲ್ಲಿರುವ ಪ್ರೋಟಿನ್ ಅಂಶವು ಕೂದಲ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೊಟ್ಟೆಯು ಒಂದು ಅತ್ಯಂತ ಹೆಚ್ಚು ಪ್ರೋಟಿನ್ ಹೊಂದಿರುವ ಆಹಾರವಾಗಿದೆ.
ಬಸಳೆ ಹಾಗೂ ಇತರೆ ಹಸಿರು ಸೊಪ್ಪುಗಳು : ಇವುಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣಾಂಶವನ್ನು ಹೊಂದಿರುವುದರಿಂದ ಕೂದಲು ಸೊಂಪಾಗಿ ಬೆಳೆಯಲು ಸಹಕಾರಿಯಾಗುತ್ತವೆ.
ಸಿಟ್ರಸ್ ಅಂಶವನ್ನು ಹೊಂದಿರುವ ಹಣ್ಣುಗಳು : ಸಿಟ್ರಸ್ ಅಂಶವನ್ನು ಹೊಂದಿರುವ ಕಿತ್ತಳೆ, ನಿಂಬೆ ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ವಿಟಮಿನ್ ಸಿ ದೊರೆಯುವಂತೆ ಮಾಡುತ್ತದೆ. ನಿತ್ಯದ ಆಹಾರದಲ್ಲಿ ಇವುಗಳ ಬಳಕೆ ಕೂದಲು ಬೆಳೆಯಲು ಅನುಕೂಲಕರವಾಗಿದೆ.
ಒಮೆಗಾ - 3 ಅಂಶವನ್ನು ಹೊಂದಿದ ಬೀಜಗಳು : ಒಮೆಗಾ - 3 ಅಂಶವನ್ನು ಹೊಂದಿರುವ ಆಹಾರಗಳು ಕೂದಲ ಸೊಂಪಾಗಿ, ದಟ್ಟವಾಗಿ ಬೆಳೆಯುವಂತೆ ಮಾಡುತ್ತದೆ. ಅದರಲ್ಲಿ ವಾಲ್ನಟ್, ಮೀನು, ಬೀಜಗಳಿಂದ ದೊರೆಯುತ್ತದೆ.
ಕ್ಯಾರೆಟ್ : ಹೆಚ್ಚಿನ ವಿಟಮಿನ್ ಅಂಶ ಹೊಂದಿರುವ ಕ್ಯಾರೇಟ್ ಕೂಡ ಕೂದಲ ಬೆಳವಣೀಗೆಯಲ್ಲಿ ಸಹಕಾರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.