5 ಸಾವಿರ ರು.ಗಾಗಿ ಪರದಾಡಿದ್ದರಂತೆ ಏರ್ಟೆಲ್ ಮಾಲೀಕ ಮಿತ್ತಲ್

Published : Dec 18, 2017, 12:48 PM ISTUpdated : Apr 11, 2018, 01:03 PM IST
5 ಸಾವಿರ ರು.ಗಾಗಿ ಪರದಾಡಿದ್ದರಂತೆ ಏರ್ಟೆಲ್ ಮಾಲೀಕ ಮಿತ್ತಲ್

ಸಾರಾಂಶ

ಇಂದು ಸಾವಿರಾರು ಕೋಟಿ ರು. ವಹಿವಾಟು ಹೊಂದಿರುವ ಏರ್ಟೆಲ್ ಮಾಲೀಕ ಸುನೀಲ್ ಮಿತ್ತಲ್, ಈ ಹಿಂದೆ ತಾವೊಮ್ಮೆ 5 ಸಾವಿರ ರು. ಹೊಂದಿಸಲಾಗದೇ ಪರದಾಡಿದ ಪ್ರಸಂಗವನ್ನು ವಿವರಿಸಿದ್ದಾರೆ.

ನವದೆಹಲಿ (ಡಿ.18): ಇಂದು ಸಾವಿರಾರು ಕೋಟಿ ರು. ವಹಿವಾಟು ಹೊಂದಿರುವ ಏರ್ಟೆಲ್ ಮಾಲೀಕ ಸುನೀಲ್ ಮಿತ್ತಲ್, ಈ ಹಿಂದೆ ತಾವೊಮ್ಮೆ 5 ಸಾವಿರ ರು. ಹೊಂದಿಸಲಾಗದೇ ಪರದಾಡಿದ ಪ್ರಸಂಗವನ್ನು ವಿವರಿಸಿದ್ದಾರೆ.

ಸಮಾರಂಭ ವೊಂದರಲ್ಲಿ ಮಾತನಾಡಿದ ಅವರು, `ಅದು 80ರ ದಶಕ. ಆಗ ನಾನು ಸೈಕಲ್ ಬಿಡಿಭಾಗಗಳ ವ್ಯವಹಾರ ಮಾಡುತ್ತಿದ್ದೆ. ಒಮ್ಮೆ ನನಗೆ 5 ಸಾವಿರ ರು. ಜರೂರಾಗಿ ಬೇಕಾಯಿತು. ಕೈಲಿ ನಯಾ ಪೈಸೆ ಇರಲಿಲ್ಲ. ಹೇಗೆ ಹಣ ಹೊಂದಿಸಬೇಕು ಎಂದು ಚಿಂತಾಕ್ರಾಂತನಾದೆ' ಎಂದು ಹೇಳಿದರು. `ಆಗ ನನಗೆ 5 ಸಾವಿರ ರು. ಕೊಡಲು ಯಾರೂ ಮುಂದೆ ಬರುತ್ತಿರಲಿಲ್ಲ.

 ಏಕೆಂದರೆ ನನ್ನ ಪರಿಸ್ಥಿತಿಯೇ ಹಾಗಿತ್ತು. ಆದಾಗ್ಯೂ ಉದ್ಯಮಿ ಬ್ರಿಜ್ಮೋಹನ್ಲಾಲ್ ಮುಂಜಾಲ್ ಅವರ ಬಳಿ ಹೋದೆ. `ಅಂಕಲ್ ನನಗೆ 5 ಸಾವಿರ ರು. ಬೇಕು' ಎಂದು ಕೇಳಿದೆ. ಸಹೃದಯಿಯಾಗಿದ್ದ ಮುಂಜಾಲ್ ನನ್ನ ನೋವನ್ನು ಅರ್ಥ ಮಾಡಿಕೊಂಡು 5 ಸಾವಿರ ರು. ಚೆಕ್ ಕೊಟ್ಟರು. ಬಳಿಕ `ಇದನ್ನೇ ಚಾಳಿ ಮಾಡಿಕೊಳ್ಳಬೇಡ' ಎಂದು ಬುದ್ಧಿವಾದವನ್ನೂ ಹೇಳಿದರು.

ಇದು ನನ್ನ ಹೃದಯಕ್ಕೆ ನಾಟಿತು. ಆ ಬಳಿಕ ನಾನು ಹಿಂದಿರುಗಿ ನೋಡಲಿಲ್ಲ. ಕಷ್ಟಪಟ್ಟು ಮುಂದೆ ಬಂದೆ. ಯಾವತ್ತೂ ಆರ್ಥಿಕ ಮುಗ್ಗಟ್ಟು ಉಂಟಾಗದಂತೆ ನೋಡಿಕೊಂಡೆ' ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಾಳೆ ಅರ್ಧ ಬೆಂಗಳೂರಿಗೆ ನೀರು ಪೂರೈಕೆ ಸ್ಥಗಿತ: ಕಾವೇರಿ 5ನೇ ಹಂತದ ಪೈಪ್‌ಲೈನ್‌ನಲ್ಲಿ ಸೋರಿಕೆ!
ಚಿನ್ನದ ಬೆಲೆ ಲಕ್ಷ ದಾಟಿದ ಬೆನ್ನಲ್ಲೇ ಕರ್ನಾಟಕದ ಈ ಜಿಲ್ಲೆಗೆ ಜಾಕ್‌ಪಾಟ್‌, ಭಾರೀ ಪ್ರಮಾಣದ ಚಿನ್ನದ ನಿಕ್ಷೇಪ ಪತ್ತೆ!