ಡಾಟಾ ಸಮರದಲ್ಲಿ ಜಿಯೋಗೆ ಸೆಡ್ಡುಹೊಡೆದ ಏರ್ ಟೆಲ್

First Published Jul 12, 2018, 11:44 AM IST
Highlights
  • 499 ರೂಗಳ ಆಫರ್ ಪರಿಷ್ಕರಿಸಿ ಡಾಟಾವನ್ನು 75 ಜಿಬಿಗೆ ಹೆಚ್ಚಿಸಲಾಗಿದೆ
  • ಹಾಲಿಯಿದ್ದ ಇದೇ ಆಫರ್ ನಲ್ಲಿ 40 ಜಿಬಿ 4ಜಿ/3ಜಿ ಡಾಟಾ ನೀಡಲಾಗುತ್ತಿತ್ತು

ಮುಂಬೈ[ಜು.12]: ದೇಶದ ಅತೀ ದೊಡ್ಡ ಟೆಲಿಕಾಂ ಸಂಸ್ಥೆ ಏರ್ ಟೆಲ್ ಪೋಸ್ಟ್ ಪೇಯ್ಡ್ ಚಂದಾದಾರರಿಗೆ ಹಾಲಿ ಯೋಜನೆಯನ್ನು ಪರಿಷ್ಕರಿಸಿ ಹೆಚ್ಚುವರಿ ಡಾಟಾ ಸೌಲಭ್ಯವನ್ನು ಒದಗಿಸಿದೆ.

ಪೋಸ್ಟ್ ಪೇಯ್ಡ್ ನ ಹಿಂದಿನ 499 ರೂಗಳ ಆಫರ್ ನಲ್ಲಿ 40 ಜಿಬಿ 4ಜಿ/3ಜಿ ಡಾಟಾ ನೀಡಲಾಗುತ್ತಿತ್ತು. ಅದೇ ಆಫರ್ ಅನ್ನು ಪರಿಷ್ಕರಿಸಿ 75 ಜಿಬಿ ಡಾಟಾಗೆ ಹೆಚ್ಚಿಸಲಾಗಿದೆ. ಪರಿಷ್ಕರಿಸಿದ ಆಫರ್ ನಲ್ಲಿ ಒಂದು ತಿಂಗಳು 75 ಜಿಬಿ, ಅನಿಯಮಿತ ಉಚಿತ ಕರೆ, ನಿತ್ಯ 100 ಎಸ್ಎಂಎಸ್ ಲಭ್ಯವಿರಲಿದೆ. ಈ ಆಫರ್ ನಲ್ಲಿ ಗ್ರಾಹಕರಿಗೆ ಇನ್ನು ಹಲವು ಸೌಲಭ್ಯಗಳು ದೊರೆಯಲಿವೆ. 

ಇತ್ತೀಚಿಗೆ ಕೆಲ ದಿನಗಳಿಂದ ಜಿಯೋ, ವೊಡಾಫೋನ್ ಸೇರಿದಂತೆ ಪ್ರಮುಖ ಟೆಲಿಕಾಂ ಸಂಸ್ಥೆಗಳು ಮತ್ತೊಂದು ಡಾಟಾ ಸಮರದಲ್ಲಿ ತೊಡಗಿವೆ. ಜಿಯೋ ಹಲವು ಅತ್ಯುತ್ತಮ ಆಫರ್ ಗಳನ್ನು ಪ್ರಕಟಿಸಿ ಗ್ರಾಹಕರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದೆ. ಜಿಯೋ ಪ್ರಕಟಿಸಿದ 199 ರೂ. ಆಫರ್ ನಲ್ಲಿ ಗ್ರಾಹಕರು 25 ಜಿಬಿ 4ಜಿ ಡಾಟಾ, ಅನಿಯಮಿತ ಕರೆ, ಉಚಿತ 100 ಎಸ್ ಎಂಎಸ್ ಪಡೆದುಕೊಳ್ಳಲಿದ್ದಾರೆ. ವೊಡಾಫೋನ್ ಕೂಡ ಹೆಚ್ಚುವರಿ ಯೋಜನೆಯನ್ನು ಪ್ರಕಟಿಸಿತ್ತು.

 

click me!