
ನವದೆಹಲಿ (ಅ.23): ಅದು ಅಟ್ಲಾಂಟಿಕ್ ಸಾಗರದ ಮಧ್ಯೆ ಇರುವ ದೊಡ್ಡ ತ್ರಿಕೋನಾಕಾರದ ಕುಳಿ. ಅದರ ಮೇಲೆ ಹಾದುಹೋಗುವ ಹಡಗುಗಳು, ವಿಮಾನಗಳು ಕಣ್ಮರೆಯಾಗುತ್ತವೆ. ಅದು ಹೇಗೆ, ಏನು, ಎತ್ತ ಎಂಬುದು ಯಾರಿಗೂ ತಿಳಿದಿಲ್ಲ.
ವಿಜ್ಞಾನ ಲೋಕಕ್ಕೆ ಅಚ್ಚರಿಯಾಗಿಯೇ ಉಳಿದಿರುವ ಈ ಬರ್ಮುಡಾ ಟ್ರಯಾಂಗಲ್ ರಹಸ್ಯದ ಬಗ್ಗೆ ಸಾಕಷ್ಟುಅಧ್ಯಯನಗಳು ನಡೆದಿವೆಯಾದರೂ, ನಿಗೂಢತೆ ಬಯಲಾಗಿಲ್ಲ. ಸದ್ಯ ವಿಜ್ಞಾನಿಗಳು ಹೊಸದೊಂದು ಅಧ್ಯಯನ ಕೈಗೊಂಡಿದ್ದು ಇಲ್ಲಿ ಹಡಗು, ವಿಮಾನ ಕಣ್ಮರೆಯಾಗಲು ಗಾಳಿ ಬಾಂಬ್ ಕಾರಣ ಎಂದು ಹೇಳಿದೆ!
ಬರ್ಮುಡಾ ಟ್ರಯಾಂಗಲ್ ಕುರಿತು ಅಮೆರಿಕಾದ ವಿಜ್ಞಾನಿಗಳ ತಂಡ ಹೊಸ ವಿಚಾರವೊಂದನ್ನು ಜಗತ್ತಿನ ಎದುರು ಇಟ್ಟಿದ್ದಾರೆ. ಪ್ರತಿಕೂಲ ಹವಾಮಾನದಿಂದಾಗಿ ಈ ತ್ರಿಕೋನಾಕಾರದ ಕುಳಿಯಲ್ಲಿ ಷಟ್ಕೋನಾಕಾರದ ಮೋಡಗಳು ಉತ್ಪತ್ತಿಯಾಗುತ್ತದೆ. ಈ ಮೋಡಗಳು ಗಂಟೆಗೆ 170 ಮೈಲು ವೇಗದಲ್ಲಿ ಬೀಸಿ ‘ಗಾಳಿ ಬಾಂಬ್'ಗಳನ್ನು ಸೃಷ್ಟಿಸುತ್ತವೆ. ಈ ಗಾಳಿಗೆ ಸಮುದ್ರದಲ್ಲಿ ಸಂಚರಿಸುವ ಹಡಗುಗಳು, ವಿಮಾನಗಳನ್ನೂ ತನ್ನತ್ತ ಸೆಳೆದುಕೊಳ್ಳುವ ಶಕ್ತಿಯಿರುತ್ತದೆ ಎಂದಿದ್ದಾರೆ ವಿಜ್ಞಾನಿಗಳು. ನಾಸಾ ಉಪಗ್ರಹದ ಚಿತ್ರದಲ್ಲಿ ದಾಖಲಾದ 88 ಕಿ.ಮೀ.ನಷ್ಟುಅಗಲದ ಮೋಡಗಳನ್ನು ವಿಶ್ಲೇಷಿಸಿ ವಿಜ್ಞಾನಿಗಳು ಈ ಅಭಿಪ್ರಾಯಕ್ಕೆ ಬಂದಿದ್ದಾರೆ.
ಮೋಡಗಳ ತಳಭಾಗದಲ್ಲಿ ಮೈಕ್ರೋಬರ್ಸ್ಟ್ (ದಿಢೀರನೆ ಗಾಳಿಯ ಪ್ರಬಲ ಪ್ರವಹಿಸುವಿಕೆ) ಉಂಟಾಗಿ, ಆ ಗಾಳಿಯ ಸ್ಫೋಟವು ಸಾಗರದ ಮೇಲೆ ಅಪ್ಪಳಿಸಿ, ಬೃಹತ್ ಅಲೆಗಳನ್ನು ಸೃಷ್ಟಿಸುತ್ತವೆ. ಈ ವೇಳೆ ಕುಳಿಯು ತೆರೆಯಲ್ಪಡುವ ಕಾರಣ, ಹಡಗುಗಳು, ವಿಮಾನಗಳು ಅದರೊಳಗೆ ಸೆಳೆಯಲ್ಪಡುತ್ತವೆ ಎಂದು ಹವಾಮಾನತಜ್ಞ ರಾರಯಂಡಿ ಸೆರ್ವೆನಿ ಹೇಳಿರುವುದಾಗಿ ‘ಸೈನ್ಸ್ ಅಲರ್ಟ್' ವರದಿ ಮಾಡಿದೆ.
ಕಾಣೆಯಾದವರು ಸಾವಿರ ಮಂದಿ: ಈ ಬರ್ಮುಡಾ ಟ್ರಯಾಂಗಲ್ನಲ್ಲಿ ಈವರೆಗೆ ಸುಮಾರು 75 ವಿಮಾನಗಳು ಹಾಗೂ ಲೆಕ್ಕಕ್ಕೇ ಸಿಗದಷ್ಟುನೌಕೆಗಳು ನಾಪತ್ತೆಯಾಗಿವೆ. ಇದರ ಕಬಂಧ ಬಾಹುಗಳಿಗೆ ಸಿಲುಕಿ 100 ವರ್ಷಗಳಲ್ಲಿ ಸಾವಿರರು ಮಂದಿ ಬಲಿಯಾಗಿದ್ದಾರೆ.
ಮಾರ್ಚ್ನಲ್ಲೂ ನಡೆದಿತ್ತು: ಇದೇ ಮಾದರಿಯ ಸಂಶೋಧನೆಯೊಂದು ಮಾರ್ಚ್'ನಲ್ಲೂ ನಡೆದಿತ್ತು. ಸಮುದ್ರದಲ್ಲಿ ಅರ್ಧ ಮೈಲು ಅಗ ಲ ಮತ್ತು 150 ಅಡಿ ಆಳದಲ್ಲಿ ಕುಳಿಗಳನ್ನು ಕಂಡಿದ್ದಾಗಿಯೂ, ಈ ಕುಳಿಗಳು ಗಾಳಿಯ ಸ್ಫೋಟದಿಂದ ಸೃಷ್ಟಿಯಾಗಿದ್ದೆಂದೂ, ಇವುಗಳೇ ಹಡಗು, ವಿಮಾನಗಳ ನಾಪತ್ತೆಗೆ ಕಾರಣ ಎಂದು ವಿಜ್ಞಾನಿಗಳು ಹೇಳಿದ್ದರು. (ಕೃಪೆ: ಕನ್ನಡಪ್ರಭ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.