
ಮಂಡ್ಯ [ನ.03]: ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಟ್ವೀಟ್ ಮಾಡುತ್ತಾ ಸದಾ ವಿವಾದಾತ್ಮಕವಾಗಿ ಸುದ್ದಿಯಾಗುವ ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಈ ಬಾರಿಯೂ ಮತದಾನದ ಹಕ್ಕನ್ನು ಮರೆತಿದ್ದಾರೆ.
ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡದೇ ದೂರ ಉಳಿದಿದ್ದ ಮಾಜಿ ಸಂಸದೆ ರಮ್ಯಾ ಇಂದು ನಡೆಯುತ್ತಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಕೇಂದ್ರದತ್ತ ತಲೆ ಹಾಕದೇ ದೂರು ಉಳಿದಿದ್ದಾರೆ.
ಮಂಡ್ಯ ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದ್ದರೂ ರಮ್ಯಾ ತಮ್ಮ ಮತದಾನದ ಹಕ್ಕನ್ನು ಚಲಾವಣೆ ಮಾಡದಿರುವುದು ಕ್ಷೇತ್ರದ ಜನತೆಗೆ ಮಿಲಿಯನ್ ಪ್ರಶ್ನೆಯಾಗಿಯೇ ಉಳಿದಿದೆ. ಸದ್ಯ ರಮ್ಯಾ ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ ಎಂದು ರಮ್ಯಾ ಆಪ್ತ ವಲಯದಿಂದ ಮಾಹಿತಿ ಸಿಕ್ಕಿದೆ.
ಮತದಾನ ಮಾಡಲು ಬಾರದೆ ಬೇಜವಾಬ್ದಾರಿ ತೋರಿಸಿರುವುದು ಇದೇ ಮೊದಲೇನಲ್ಲ. ಇದು ಸತತ ಮೂರನೇ ಬಾರಿಯ ಗೈರಾಗಿದ್ದು, ಕಳೆದ ವಿಧಾನಸಭೆ ಮ್ತತು ನಗರಸಭೆ ಚುನಾವಣೆಯಲ್ಲೂ ರಮ್ಯಾ ಮತದಾನ ಮಾಡಿರಲಿಲ್ಲ.
ಕಳೆದ ವಿಧಾನಸಭೆ, ನಗರಸಭೆ ಚುನಾವಣೆಯಲ್ಲೂ ರಮ್ಯಾ ಮತದಾನ ಮಾಡದೇ ಗೈರಾಗಿದ್ದರು. ಓ ಪ್ರಜ್ಞಾವಂತೆಯಾಗಿರುವ ರಮ್ಯಾ ಮೇಡಂ ತಮ್ಮ ಮತದಾನ ಹಕ್ಕು ಚಲಾಯಿಸದಿರುವುದು ಎಷ್ಟು ಸರಿ ಎನ್ನುವುದು ಸಾರ್ವಜನಿಕರ ಮಾತು.
ಅಷ್ಟಕ್ಕೂ ರಮ್ಯಾಗೆ ಮತದಾನದ ಮೇಲೆ ಯಾಕೆ ಅಷ್ಟು ಅಸಡ್ಡೆ ಎನ್ನುವುದು ಯಾರಿಗೂ ತಿಳಿಯುತ್ತಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.