ಕೇಂದ್ರ, ಪ್ರಧಾನಿ ಮೋದಿ ಟೀಕಿಸಿದ ಪತ್ರಿಕೆ ಸಂಪಾದಕ ವಜಾ

Published : Aug 16, 2017, 05:08 PM ISTUpdated : Apr 11, 2018, 12:48 PM IST
ಕೇಂದ್ರ, ಪ್ರಧಾನಿ ಮೋದಿ ಟೀಕಿಸಿದ ಪತ್ರಿಕೆ ಸಂಪಾದಕ ವಜಾ

ಸಾರಾಂಶ

ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿಯವರನ್ನು ಟೀಕಿಸಿದ ಅಣ್ಣಾ ಡಿಎಂಕೆ ಮುಖವಾಣಿ ಸಂಪಾದಕನನ್ನು ವಜಾ ಮಾಡಿರುವ ಘಟನೆ ನಡೆದಿದೆ. ಎಐಎಡಿಎಂಕೆ ಪಕ್ಷದ ಮುಖವಾಣಿಯಾಗಿರುವ ನಮಾಡು ಎಂಜಿಆರ್’ನ ಸಂಪಾದಕ ಮಾರುದು ಅಲಗುರಾಜ್’ರನ್ನು ವಜಾ ಮಾಡಿರುವುದನ್ನು ಎಐಡಿಎಎಂಕೆ-ಅಮ್ಮಾ ಬಣದ ಪ್ರಧಾನ ಕಾರ್ಯದರ್ಶಿ ಟಿ.ಟಿ.ವಿ. ದಿನಕರನ್ ಖಚಿತ ಪಡಿಸಿದ್ದಾರೆಂದು ಏಎನ್ಐ ವರದಿ ಮಾಡಿದೆ.

ಚೆನ್ನೈ: ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿಯವರನ್ನು ಟೀಕಿಸಿದ ಅಣ್ಣಾ ಡಿಎಂಕೆ ಮುಖವಾಣಿ ಸಂಪಾದಕನನ್ನು ವಜಾ ಮಾಡಿರುವ ಘಟನೆ ನಡೆದಿದೆ.

ಎಐಎಡಿಎಂಕೆ ಪಕ್ಷದ ಮುಖವಾಣಿಯಾಗಿರುವ ನಮಾಡು ಎಂಜಿಆರ್’ನ ಸಂಪಾದಕ ಮಾರುದು ಅಲಗುರಾಜ್’ರನ್ನು ವಜಾ ಮಾಡಿರುವುದನ್ನು ಎಐಡಿಎಎಂಕೆ-ಅಮ್ಮಾ ಬಣದ ಪ್ರಧಾನ ಕಾರ್ಯದರ್ಶಿ ಟಿ.ಟಿ.ವಿ. ದಿನಕರನ್ ಖಚಿತ ಪಡಿಸಿದ್ದಾರೆಂದು ಏಎನ್ಐ ವರದಿ ಮಾಡಿದೆ.

ಎಐಡಿಎಂಕೆ ಪಕ್ಷ ಮೂರು ಹೋಳಾಗಲು ಹಾಗೂ ಅದರ ಎರಡೆಲೆ ಚಿಹ್ನೆಯನ್ನು ತಡೆಹಿಡಿಯಲಾಗಲು ಕೇಂದ್ರ ಸರ್ಕಾರವೇ ಕಾರಣವೆಂದು ನಮಾಡು ಎಂಜಿಆರ್’ನಲ್ಲಿ ಅಲಗುರಾಜ್ ಲೇಖನವನ್ನು ಬರೆದಿದ್ದರು.

‘ಕೇಸರಿ ಬಣ್ಣ ಬಳಿಯಿರಿ, ಎಐಡಿಎಂಕೆಯನ್ನು ಮುಗಿಸಿಬಿಡಿ’ ಎಂಬ ಶೀರ್ಷಿಕೆ ಹೊಂದಿದ್ದ ಕವನವು ಮುಖವಾಣಿಯಲ್ಲಿ ಪ್ರಕಟವಾಗಿದ್ದು, ಬಿಜೆಪಿಯನ್ನು ಟೀಕಿಸಲಾಗಿತ್ತು ಎಂದು ಹೇಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರ ಬಗ್ಗೆ ಲೇಖನ ಬರೆದಿದ್ದಕ್ಕೆ ನನ್ನನ್ನು ವಜಾ ಮಾಡಲಾಗಿದೆಯೆಂದು ಅಲಗುರಾಜ್ ಏಎನ್ಐಗೆ ತಿಳಿಸಿದ್ದಾರೆ.

ನರೇಂದ್ರ ಮೋದಿಯವರು ನನ್ನ ಪೆನ್ನನ್ನು ಕಸಿದುಕೊಂಡಿದ್ದಾರೆ, ಆದರೆ ಯಾವ ಸರ್ವಾಧಿಕಾರಿಯು ನನ್ನನ್ನು ತಡೆಯಲು ಸಾದ್ಯವಿಲ್ಲವೆಂದು ಅಲಗುರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಒಂದು ವೈರಸ್ ಎಂಟ್ರಿ, 14 ಕೋಟಿ ರೂ ಕಳೆದುಕೊಂಡು ರ‍್ಯಾಪಿಡೋ ಚಾಲಕನಾದ ಉದ್ಯಮಿ ಕಣ್ಣೀರ ಕತೆ
ಒಂದೇ ವರ್ಷದಲ್ಲಿ 1 ಲಕ್ಷ ಮೌಲ್ಯದ ಕಾಂಡೋಮ್‌‌ ಖರೀದಿ ಮಾಡಿದ ಚೆನ್ನೈ ವ್ಯಕ್ತಿ!