
ನವದೆಹಲಿ[ಆ.21]: ಪ್ರತಿಪಕ್ಷಗಳು ಹಾಗೂ ನೌಕರರ ತೀವ್ರ ವಿರೋಧದ ನಡುವೆಯೂ ಕೆಲ ಮಾರ್ಗಗಳ ರೈಲುಗಳನ್ನು ಖಾಸಗಿ ವಲಯಕ್ಕೆ ವಹಿಸಲು ಮುಂದಾಗಿರುವ ರೈಲ್ವೆ ಇಲಾಖೆ, ಇದರ ಮೊದಲ ಭಾಗವಾಗಿ ಅಹಮದಾಬಾದ್-ಮುಂಬೈ ಸೆಂಟ್ರಲ್ ಹಾಗೂ ದೆಹಲಿ-ಲಖನೌ ಮಾರ್ಗದ ಎರಡು ತೇಜಸ್ ಎಕ್ಸ್‌ಪ್ರೆಸ್ ರೈಲುಗಳನ್ನು ಐರ್‌ಸಿಟಿಸಿಗೆ ವಹಿಸಲು ನಿರ್ಧರಿಸಿದೆ.
ಈ ಎರಡೂ ರೈಲುಗಳ ಪ್ರಯಾಣ ದರವನ್ನು ಐಆರ್‌ಸಿಟಿಸಿಯೇ ನಿರ್ಧರಿಸಲಿದೆ. ಆದರೆ, ಗ್ರಾಹಕರಿಗೆ ಯಾವುದೇ ರೀತಿಯ ಹೊರೆಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.
ರೈಲ್ವೆ ಮಂಡಳಿಯ ನೀಲನಕ್ಷೆಯ ಪ್ರಕಾರ, ಮುಂದಿನ 3 ವರ್ಷಗಳ ಕಾಲ ಈ ಎರಡೂ ರೈಲುಗಳನ್ನು ಐಆರ್‌ಸಿಟಿಸಿ(ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಹಾಗೂ ಟೂರಿಸಂ ಕಾರ್ಪೊರೇಷನ್)ಗೆ ವಹಿಸಿಕೊಡಲು ನಿರ್ಧರಿಸಲಾಗಿದ್ದು, ಈ ಅವಧಿಯಲ್ಲಿ ಈ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಯಾವುದೇ ರೀತಿಯ ರಿಯಾಯತಿ, ವಿಶೇಷ ಸವಲತ್ತು ಇರಲ್ಲ. ಡ್ಯೂಟಿ ಪಾಸ್‌ಗಳನ್ನು ಮಾನ್ಯ ಮಾಡಲಾಗುವುದಿಲ್ಲ. ಅಲ್ಲದೆ, ಈ ಅವಧಿಯಲ್ಲಿ ಐಆರ್‌ಸಿಟಿಯ ರೈಲುಗಳಲ್ಲಿ ರೈಲ್ವೆ ಇಲಾಖೆಯ ಯಾವುದೇ ಸಿಬ್ಬಂದಿ ಟಿಕೆಟ್ ಪರಿಶೀಲನೆ ಮಾಡುವಂತೆಯೂ ಇಲ್ಲ.
ಆದರೆ, ಈ ರೈಲುಗಳ ಚಾಲನೆ ಹಾಗೂ ನಿರ್ವಹಣೆ ಜವಾಬ್ದಾರಿ ಮಾತ್ರವೇ ರೈಲ್ವೆ ಇಲಾಖೆಯ ಸಿಬ್ಬಂದಿಯಾದ ಲೋಕೋ ಪೈಲಟ್‌ಗಳು, ಗಾರ್ಡ್‌ಗಳು ಹಾಗೂ ಸ್ಟೇಷನ್ ಮಾಸ್ಟರ್‌ಗಳ ಹೆಗಲ ಮೇಲಿರಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.