
ಗಾಂಧಿನಗರ(ಜು.09): ಗುಜರಾತ್'ನ ಅಹಮದಾಬಾದ್ ನಗರವನ್ನು ಯುನೆಸ್ಕೋದ ವಿಶ್ವ ಪಾರಂಪರಿಕ ಸಮಿತಿ ಪೋಲಾಂಡ್'ನಲ್ಲಿ ನಡೆದ ಕ್ರಾಕೋ'ದಲ್ಲಿ ನಡೆದ ಸಭೆಯಲ್ಲಿ 'ವಿಶ್ವ ಪಾರಂಪರಿಕ ನಗರವನ್ನಾಗಿ ಆಯ್ಕೆ ಮಾಡಿದೆ.
11ನೇ ಶತಮಾನದಲ್ಲಿ ಭಾರತದ ಪುರಾತತ್ವ ಸಮೀಕ್ಷೆಯಿಂದ ರಕ್ಷಿಸಲ್ಪಟ್ಟ 36 ಸಂರಚನೆಗಳನ್ನು ಹೊಂದಿದ್ದು, ಪ್ರಾಚೀನ ವಾಸ್ತುಶಿಲ್ಪದೊಂದಿಗೆ ಹಲವು ಕಟ್ಟಡಗಳನ್ನು ನಿರ್ಮಿಸಲಾಗಿದ್ದು,ಇದು ಪ್ರಾಚೀನ ಸಮುದಾಯದಲ್ಲಿದ್ದಂತಹ ಬದುಕಿನ ಮೂಲತತ್ವವನ್ನು ತೋರ್ಪಡಿಸುತ್ತದೆ' ಪಾರಂಪರಿಕ ಸಮಿತಿ ತಿಳಿಸಿದೆ.
ಭಾರತದ ಮೊದಲ 'ವಿಶ್ವ ಪಾರಂಪರಿಕ ನಗರವನ್ನಾಗಿ ಆಯ್ಕೆ ಮಾಡಿರುವುದಕ್ಕೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. 'ವಿಶ್ವ ಪಾರಂಪರಿಕ ನಗರವನ್ನಾಗಿ ಘೋಷಿಸಲು ಭಾರತದಿಂದ ಅಹಮದಾಬಾದ್, ಮುಂಬೈ ಹಾಗೂ ದೆಹಲಿ ನಗರಗಳನ್ನು ಯುನೆಸ್ಕೋ'ಗೆ ಕಳುಹಿಸಿಕೊಡಲಾಗಿತ್ತು. ಅಂತಿಮವಾಗಿ ಅಹಮದಾಬಾದ್ ಆಯ್ಕೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.