ರೌಡಿ ರೋಹಿತ್'ಗೆ ಆಶ್ರಯ ನೀಡಿದ್ರಾ ಅಗ್ನಿ ಶ್ರೀಧರ್?: ಪ್ರಕರಣದಲ್ಲಿ ನನ್ನ ಕೈವಾಡ ಇಲ್ಲ ಎಂದು ಕಣ್ಣೀರಿಟ್ಟ ಅಗ್ನಿ!

Published : Feb 08, 2017, 02:31 AM ISTUpdated : Apr 11, 2018, 01:10 PM IST
ರೌಡಿ ರೋಹಿತ್'ಗೆ ಆಶ್ರಯ ನೀಡಿದ್ರಾ ಅಗ್ನಿ ಶ್ರೀಧರ್?: ಪ್ರಕರಣದಲ್ಲಿ ನನ್ನ ಕೈವಾಡ ಇಲ್ಲ ಎಂದು ಕಣ್ಣೀರಿಟ್ಟ ಅಗ್ನಿ!

ಸಾರಾಂಶ

ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ್ ಮೂರ್ತಿ ಅಲಿಯಾಸ್ ಕಡಬಗೆರೆ ಸೀನನ ಮೇಲಿನ ಶೂಟೌಟ್ ಪ್ರಕರಣದ ತನಿಖೆ ಚುರುಕು ಗೊಂಡಿದೆ. ಪತ್ರಕರ್ತ, ಮಾಜಿ ಡಾನ್, ಮಾಜಿ ರೌಡಿ ಶೀಟರ್ ಅಗ್ನಿ ಶ್ರೀಧರ್ ಹಲ್ಲೆ ಪ್ರಕರಣ ಸಂಬಂಧ ಶಂಕಿತ ಆರೋಪಿಗಳಿಗೆ ಆಶ್ರಯ ನೀಡಿದ್ದಾರೆಂಬ ಗುಮಾನಿ ಪೊಲೀಸರಿಗೆ ಇತ್ತು.. ಹೀಗಾಗಿ ನಿನ್ನೆ ಕುಮಾರಸ್ವಾಮಿ ಲೇಔಟ್​ನಲ್ಲಿರುವ ಅಗ್ನಿ ಶ್ರೀಧರ್ ಮನೆ ಮೇಲೆ ಪೊಲೀಸರು ದಾಳಿ ನಡೆಸಿದರು. ಆಗ ಬೆಚ್ಚಿಬೀಳುವ ಸರದಿ ಪೊಲೀಸರದ್ದು.

ಬೆಂಗಳೂರು(ಫೆ.08): ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ್ ಮೂರ್ತಿ ಅಲಿಯಾಸ್ ಕಡಬಗೆರೆ ಸೀನನ ಮೇಲಿನ ಶೂಟೌಟ್ ಪ್ರಕರಣದ ತನಿಖೆ ಚುರುಕು ಗೊಂಡಿದೆ. ಪತ್ರಕರ್ತ, ಮಾಜಿ ಡಾನ್, ಮಾಜಿ ರೌಡಿ ಶೀಟರ್ ಅಗ್ನಿ ಶ್ರೀಧರ್ ಹಲ್ಲೆ ಪ್ರಕರಣ ಸಂಬಂಧ ಶಂಕಿತ ಆರೋಪಿಗಳಿಗೆ ಆಶ್ರಯ ನೀಡಿದ್ದಾರೆಂಬ ಗುಮಾನಿ ಪೊಲೀಸರಿಗೆ ಇತ್ತು.. ಹೀಗಾಗಿ ನಿನ್ನೆ ಕುಮಾರಸ್ವಾಮಿ ಲೇಔಟ್​ನಲ್ಲಿರುವ ಅಗ್ನಿ ಶ್ರೀಧರ್ ಮನೆ ಮೇಲೆ ಪೊಲೀಸರು ದಾಳಿ ನಡೆಸಿದರು. ಆಗ ಬೆಚ್ಚಿಬೀಳುವ ಸರದಿ ಪೊಲೀಸರದ್ದು.

-ಅಗ್ನಿಶ್ರೀಧರ್ ಮನೆಯಲ್ಲಿ ರಿವಾಲ್ವರ್​, ಕತ್ತಿ, ಬುಲೆಟ್'​​ಗಳ ರಾಶಿ

-ಸುಮಾರು 7 ಲಕ್ಷ ನಗದು ಹಾಗೂ 400 ಗ್ರಾಂ ಚಿನ್ನ

-ಶ್ರೀಧರ್​​ ಬಲಗೈ ಭಂಟ ಬಚ್ಚನ್​ ಮನೆಯಲ್ಲಿ ಮಾರಕಾಸ್ತ್ರಗಳು

-4 ರಿವಾಲ್ವೡ​​, 24 ರೌಂಡ್​ ಬುಲೆಟ್​, 2 ಲಾಂಗು

-2 ಬಟನ್​ ಚಾಕು, 4 ಬೇಸ್​​ಬಾಲ್​ ಬ್ಯಾಟ್​​, 3 ಡ್ರ್ಯಾಗರ್

-2 ಪೋಕರ್​​ ಚಾಕು, ಎರಡು ಕತ್ತಿ, ಅಕ್ರಮ ಗಾಂಜಾ

-6 ಲಕ್ಷ 88 ಸಾವಿರ ನಗದು, 418 ಗ್ರಾಂ ಚಿನ್ನ

ಅಗ್ನಿಶ್ರಿಧರ್ ಆಪ್ತ ಬಚ್ಚನ್ ಸೇರಿ 8 ಮಂದಿ ವಿರುದ್ಧ ಎಫ್​ಐಆರ್ ದಾಖಲಿಸಿಕೊಳ್ಳಲಾಗಿದೆ. ಇನ್ನೂ ವಿಚಾರಣೆ ವೇಳೆ ಅಗ್ನಿ ಶ್ರೀಧರ್ ಪೊಲೀಸರ ಎದುರು ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಇದರಿಂದ ಲಘು ಹೃದಯಾಘಾತವಾಗಿ ಸಾಗರ್ ಆಸ್ಪತ್ರೆಗೆ ಸೇರಿಸಲಾಗಿದೆ.

ಸೀನನ ಹತ್ಯೆಗೆ ಪ್ರಭಾವಿ ಶಾಸಕನೊಬ್ಬ ಒಂದು ಕೋಟಿ ರೂಪಾಯಿಗೆ ರೋಹಿತ್ ಅಲಿಯಾಸ್ ಒಂಟೆಗೆ ಸುಪಾರಿ ನೀಡಿದ್ದ ಎನ್ನಲಾುತ್ತಿದ್ದು, ಇನ್ನೂ ಕಡಬಗೆರೆ ಸೀನನ ಮೇಲಿನ ಗುಂಡಿನ ದಾಳಿ ಬಳಿಕ ರೋಹಿತ್ ನಾಪತ್ತೆಯಾಗಿದ್ದ. ಶ್ರೀಧರ್ ಮನೆಯಲ್ಲೇ ರೋಹಿತ್ ಅಡಗಿರುವ ಶಂಕೆಯಿಂದ ಪೊಲೀಸರು ದಾಳಿ ನಡೆಸಿದಾಗ.. ಮಾಜಿ ಡಾನ್, ಹಾಲಿ ಪತ್ರಕರ್ತ ಶ್ರೀಧರ್ ನಿಜ ಬಣ್ಣ ಬಯಲಾಗಿದೆ. ಸದ್ಯ ಜೈಲುವಾಸ ತಪ್ಪಸಿಕೊಳ್ಳಲು ಶ್ರೀಧರ್ ಆಸ್ಪತ್ರೆ ಸೇರಿದ್ದಾನೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ, ವಿವಿಐಪಿಗೆ ಐದು ಹೆಲಿಪ್ಯಾಡ್ ವ್ಯವಸ್ಥೆ!
ಲಿಯೋನಲ್ ಮೆಸ್ಸಿಗೆ ಪಾಸ್ ವೈಡ್ ಪಾಸ್ ಕೊಟ್ಟು ವೈರಲ್ ಆದ ಸಿಎಂ ರೇವಂತ್ ರೆಡ್ಡಿ