
ಮಂಗಳೂರು (ನ.12): ಬರೋಬ್ಬರಿ ಎರಡು ವರ್ಷಗಳ ಬಳಿಕ ನಡೆದ ಕಾನೂನು ಸಮರದ ನಂತ್ರ ಕೊನೆಗೂ ಕಂಬಳಕ್ಕೆ ಗ್ರೀನ್ ಸಿಗ್ನಲ್ ಸಿಕ್ಕ ಬೆನ್ನಲ್ಲೇ ನಿನ್ನ ಮೂಡಬಿದ್ರೆಯಲ್ಲಿ ವಿಜಯೋತ್ಸವ ಕಂಬಳ ನಡೆದಿತ್ತು. ಆದರೆ ಈ ಕಂಬಳದಲ್ಲೂ ಕೋಣಗಳನ್ನ ಹಿಂಸಿಸಲಾಗಿದೆ ಅಂತ ಪೇಟಾ ಪ್ರಾಣಿ ದಯಾ ಸಂಘ ಮತ್ತೆ ತಕರಾರು ತೆಗೆದಿದ್ದು, ನಾಳೆ ಸುಪ್ರೀಂ ಕೋರ್ಟ್ಗೆ ಸಾಕ್ಷ್ಯ ಸಲ್ಲಿಸೋದಾಗಿ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದೆ.
ನಿನ್ನೆ ನಡೆದ ಕಂಬಳದಲ್ಲಿ ರಹಸ್ಯವಾಗಿ ಪೇಟಾದ ಕಾರ್ಯಕರ್ತರು ತೆಗೆದ ಫೋಟೋ ಮತ್ತು ವೀಡಿಯೋಗಳಲ್ಲಿ ಕಂಬಳದ ಕೋಣಗಳ ಮೇಲೆ ಹಿಂಸೆ ನಡೆದಿರೋದು ಸಾಬೀತಾಗಿದೆ ಎಂದು ಪೇಟಾ ಹೇಳಿದೆ. ಅಲ್ಲದೇ ಈ ಸಂಬಂಧ ಕೆಲ ಫೋಟೋಗಳನ್ನ ಪೇಟಾ ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದೆ. ಶಾಸಕ ಅಭಯಚಂದ್ರ ಜೈನ್ ನೇತೃತ್ವದಲ್ಲಿ ನಿನ್ನೆ ಎರಡು ವರ್ಷಗಳ ಬಳಿಕ ಮೊದಲ ಬಾರಿಗೆ ಮೂಡಬಿದ್ರೆಯಲ್ಲಿ ಕಂಬಳ ವಿಜಯೋತ್ಸವ ನಡೆದಿತ್ತು. ಸದ್ಯ ಒಂದು ವಾರ ಕಂಬಳ ನಡೆಸಲು ಗ್ರೀನ್ ಸಿಗ್ನಲ್ ಸಿಕ್ಕಿದ್ದು, ರಾಜ್ಯ ಸರ್ಕಾರದ ವಿಧೇಯಕ ಮಂಡಿಸಿರೋ ಕಾರಣದಿಂಧ ಕಂಬಳಕ್ಕೆ ಅವಕಾಶ ಸಿಕ್ಕಿದೆ. ಆದ್ರೆ ಯಾವುದೇ ಕಾರಣಕ್ಕೂ ಮನೋರಂಜನೆಯ ಹೆಸ್ರಿನಲ್ಲಿ ಹಿಂಸೆ ಸಲ್ಲದು ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಆದ್ರೆ ನಿನ್ನೆ ನಡೆದ ಕಂಬಳದಲ್ಲಿ ಹಿಂಸೆ ನಡೆದಿದೆ ಅಂತ ಆರೋಪಿಸಿರೋ ಪೇಟಾ ಈ ಸಂಬಂಧ ಧಾಖಲೆಗಳನ್ನ ಬಹಿರಂಗ ಪಡಿಸಿದ್ದು, ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸೋದಾಗಿ ಹೇಳಿದೆ. ಹೀಗಾಗಿ ಮತ್ತೆ ಕಂಬಳಕ್ಕೆ ಆತಂಕ ಎದುರಾಗಿದ್ದು, ಪೇಟಾದ ತಕರಾರು ಮತ್ತೆ ಎದುರಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.