
ಸಿಎಂ ಜಯಾ ನಿಧನದ ನಂತರ ದುಃಖ ಮತ್ತು ಆಘಾತ ತಾಳಲಾಗದೆ ಸುಮಾರು 77 ಮಂದಿ ಸಾವಿಗೀಡಾಗಿದ್ದಾರೆ ಎಂದು ಎಐಎಡಿಎಂಕೆ ಬುಧವಾರ ತಿಳಿಸಿದೆ. ಸಾವಿಗೀಡಾಗಿರುವ ಮಂದಿಯ ಕುಟುಂಬಗಳಿಗೆ 3 ಲಕ್ಷ ಪರಿಹಾರ ಘೋಷಿಸಲಾಗಿದೆ. ಅಲ್ಲದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಮತ್ತು ಬೆರಳು ಕತ್ತರಿಸಿಕೊಂಡಿದ್ದ ಪಕ್ಷದ ಕಾರ್ಯಕರ್ತರಿಗೆ 50,000 ಪರಿಹಾರ ನೀಡುವುದಾಗಿಯೂ ಪಕ್ಷ ತಿಳಿಸಿದೆ.
ಈ ನಡುವೆ, ಬುಧವಾರವೂ ಜಯಲಲಿತಾ ಅವರ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಸಮಾ ಬಳಿ ಜಮಾಯಿಸಿ ಕಂಬನಿ ಮಿಡಿದರು. ಜತೆಗೆ ನೂರಾರು ಬೆಂಬಲಿಗರು ‘ಅಮ್ಮ’ನ ಅಗಲಿಕೆ ನೋವಿನಲ್ಲಿ ಕೇಶಮಂಡನ ಮಾಡಿಸಿಕೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.