ಏರ್ ಶೋ : ನೆಲಕ್ಕೆ ಬಿದ್ದ ಪೈಲಟ್ ನೆರವಿಗೆ ಧಾವಿಸಿದ ವಿದ್ಯಾರ್ಥಿಗಳು

Published : Feb 20, 2019, 07:22 AM ISTUpdated : Feb 20, 2019, 11:44 AM IST
ಏರ್ ಶೋ : ನೆಲಕ್ಕೆ ಬಿದ್ದ ಪೈಲಟ್ ನೆರವಿಗೆ ಧಾವಿಸಿದ ವಿದ್ಯಾರ್ಥಿಗಳು

ಸಾರಾಂಶ

ಸೂರ್ಯ ಕಿರಣ್‌ ವಿಮಾನ ದುರಂತಕ್ಕೆ ಸಿಲುಕಿ ಪ್ಯಾರಾ​ಚೂ​ಟ್‌​ನಿಂದ ವಿಮಾ​ನ​ದಿಂದ ಹೊರ ಚಿಮ್ಮಿ ಯಲ​ಹಂಕದ ಇಸ್ರೋ ಲೇಔ​ಟ್‌ನ ಹೊಲ​ವೊಂದ​ರಲ್ಲಿ ಗಾಯ​ಗೊಂಡು ಬಿದ್ದಿದ್ದ ವಿಂಗ್‌ ಕಮಾಂಡರ್‌ ವಿ.ಟಿ.ಶೆಲ್ಕೆ ಅವರನ್ನು ಕನ್ನ​ಡದ ಐವರು ಹುಡು​ಗರು ಸಂತೈ​ಸಿದ ರೀತಿ ಕನ್ನ​ಡಿ​ಗರ ನಿಜ ಮನೋ​ಗುಣ​ವನ್ನು ಜಗ​ತ್ತಿನ ಮುಂದೆ ತೆರೆ​ದಿ​ಟ್ಟಿದೆ.

ಬೆಂಗಳೂರು:  ಸೂರ್ಯ ಕಿರಣ್‌ ವಿಮಾನ ಡಿಕ್ಕಿಯಂತಹ ಮಹಾ ದುರಂತದ ವೇಳೆ ಕನ್ನ​ಡಿ​ಗರ ಸಮಯ ಪ್ರಜ್ಞೆ ಹಾಗೂ ಸಂಕ​ಷ್ಟ​ದ​ಲ್ಲಿ​ರು​ವ​ವರ ನೆರ​ವಿಗೆ ಧಾವಿ​ಸುವ ಮಾನ​ವೀಯ ಗುಣ ಬೆಳ​ಕಿಗೆ ಬಂದಿ​ದೆ.

ಹೌದು, ಈ ದುರಂತಕ್ಕೆ ಸಿಲುಕಿ ಪ್ಯಾರಾ​ಚೂ​ಟ್‌​ನಿಂದ ವಿಮಾ​ನ​ದಿಂದ ಹೊರ ಚಿಮ್ಮಿ ಯಲ​ಹಂಕದ ಇಸ್ರೋ ಲೇಔ​ಟ್‌ನ ಹೊಲ​ವೊಂದ​ರಲ್ಲಿ ಗಾಯ​ಗೊಂಡು ಬಿದ್ದಿದ್ದ ವಿಂಗ್‌ ಕಮಾಂಡರ್‌ ವಿ.ಟಿ.ಶೆಲ್ಕೆ ಅವರನ್ನು ಕನ್ನ​ಡದ ಐವರು ಹುಡು​ಗರು ಸಂತೈ​ಸಿದ ರೀತಿ ಕನ್ನ​ಡಿ​ಗರ ನಿಜ ಮನೋ​ಗುಣ​ವನ್ನು ಜಗ​ತ್ತಿನ ಮುಂದೆ ತೆರೆ​ದಿ​ಟ್ಟಿದೆ.

ನಿಟ್ಟೆಮೀನಾಕ್ಷಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳಾದ ಚೇತನ್‌ ಕುಮಾರ್‌, ಪ್ರಜ್ವಲ್‌, ಆಕಾಶ್‌ ಕೊಡ್ಲೆ ಮತ್ತು ಓಂಕಾರ್‌ ರೆಡ್ಡಿ ಅವರು ಪೈಲಟ್‌ ಶೆಲ್ಕೆ ಅವ​ರನ್ನು ಸಂತೈ​ಸಿದ ರೀತಿ ಹಾಗೂ ಅವರಿಗೆ ನೆರವಾಗಿದ್ದಾರೆ. ಈ ಸಂದ​ರ್ಭ​ದಲ್ಲಿ ಹುಡು​ಗರು ನಡೆ​ದು​ಕೊಂಡ ರೀತಿ​ಯನ್ನು ಮೊಬೈ​ಲ್‌​ನಲ್ಲಿ ಚಿತ್ರೀ​ಕ​ರಿ​ಸ​ಲಾ​ಗಿದ್ದು, ಆ ದೃಶ್ಯ​ಗಳು ವೈರಲ್‌ ಆಗಿವೆ.

ಇಸ್ರೋ ಲೇಔ​ಟ್‌ನ ಅಪಾರ್ಟ್‌ಮೆಂಟ್‌ನ ಟೆರೇಸ್‌ ಮೇಲೆ ನಿಂತು ವಿಮಾನಗಳ ತಾಲೀಮು ವೀಕ್ಷಿಸುತ್ತಿದ್ದ ವಿದ್ಯಾರ್ಥಿಗಳು ವಿಮಾನಗಳು ಅಪಘಾತಕ್ಕೀಡಾಗಿ ಧರೆಗುರುಳುತ್ತಿದ್ದ ಸ್ಥಳಕ್ಕೆ ಧಾವಿ​ಸಿ​ದ್ದಾರೆ. ಅಷ್ಟೊತ್ತಿಗೆ ಯಲಹಂಕದ ಇಸ್ರೋ ಲೇಔಟ್‌ ವ್ಯಾಪ್ತಿಯಲ್ಲಿ ಬಿದ್ದು ವಿಮಾನಗಳು ಹೊತ್ತಿ ಧಗಧಗಿಸಿ ಉರಿಯುತ್ತಿದ್ದುದು ಕಂಡ ಯುವಕರು ಎದೆಗುಂದದೆ ಸಮೀಪವೇ ನಿತ್ರಾಣಗೊಂಡು ಬಿದ್ದಿದ್ದ ಪೈಲಟ್‌ ಶೆಲ್ಕೆ ಬಳಿ ತೆರಳಿ ಅವ​ರನ್ನು ಉಪ​ಚ​ರಿ​ಸಲು ಆರಂಭಿ​ಸು​ತ್ತಾರೆ. ‘ಏನೂ ಆಗಿಲ್ಲ, ಗಾಬರಿ ಪಡ​ಬೇಡಿ’ ಎಂದು ಸಂತೈ​ಸುವ ಈ ಹುಡು​ಗರು, ಪೈಲ​ಟ್‌ನ ಕೈಯನ್ನು ಹಿಡಿದು ಸಮಾ​ಧಾನ ಹೇಳಿದ್ದಾರೆ.

ಜತೆಗೆ, ಶೆಲ್ಕೈ ಅವ​ರಿಂದಲೇ ಮಾಹಿತಿ ಪಡೆದು ಅವ​ರಿದ್ದ ವಿಮಾ​ನದ ಆಸನ ಮತ್ತು ಪ್ಯಾರಾಚೂಟ್‌ನಿಂದ ಬೇರ್ಪಡಿಸಿದ್ದಾರೆ. ಇದೇ ವೇಳೆ ಅವರು ತಮ್ಮ ಸಹ ಪೈಲಟ್‌ ಎಲ್ಲಿದ್ದಾರೆ ನೋಡುವಂತೆ ಶೆಲ್ಕೆ ಹೇಳಿ​ದಾಗ ಕೂಡಲೇ ಅವ​ರನ್ನು ಹುಡು​ಕಾ​ಡುವ ಹುಡು​ಗರು, ಸ್ವಲ್ಪ ದೂರಗಲ್ಲಿ ಬಿದ್ದಿದ್ದ ಮತ್ತೊಬ್ಬ ಪೈಲ​ಟ್‌ಅನ್ನು ಉಪ​ಚ​ರಿಸಿದರು. ಇದೇ ವೇಳೆ ಅಗ್ನಿ​ಶಾ​ಮಕ ದಳ ಹಾಗ ಪೊಲೀ​ಸ​ರಿಗೂ ದೂರ​ವಾಣಿ ಮೂಲಕ ಮಾಹಿತಿ ನೀಡಿದರು.

ಪೈಲ​ಟ್‌​ಗ​ಳಿಗೆ ನಾವು ಉಪ​ಚ​ರಿಸಿ, ಸಂತೈ​ಸುವ ವೇಳೆಗೆ ರಕ್ಷಣಾ ಇಲಾಖೆಯ ತುರ್ತು ದಳದವರು ಬಂದು ಅವರನ್ನು ಕರೆದೊಯ್ದರು ಎಂದು ವಿದ್ಯಾರ್ಥಿ ಚೇತನ್‌ ಕುಮಾರ್‌ ‘ಕನ್ನಡಪ್ರಭ’ಗೆ ತಿಳಿಸಿದರು.

ಫೆ.20ರಿಂದ ಆರಂಭವಾಗುವ ಏರ್ ಶೋ 24ರವರೆಗೆ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Electric Scooter: ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಬದಲಿಸೋದು ಕಷ್ಟವೇ? ಸತ್ಯ ಏನು? ಸುಳ್ಳೇನು?
Gold ETF: ಗೋಲ್ಡ್ ಇಟಿಎಫ್ ಅಂದ್ರೇನು? ಜನರು ಮುಗಿಬಿದ್ದು ಇದ್ರಲ್ಲಿ ಹೂಡಿಕೆ ಮಾಡ್ತಿರೋದು ಯಾಕೆ?