
ಶಬರಿಮಲೆ(ಅ.21): ‘ಶಬರಿಮಲೆ ವಿವಾದದಲ್ಲಿ ನಾನು ಪ್ರತಿಕ್ರಿಯಿಸಲ್ಲ’ ಎನ್ನುತ್ತಲೇ ಕರ್ನಾಟಕ ಸರ್ಕಾರವನ್ನು ಎಳೆದು ತಂದಿರುವ ನಟ ಕಮಲ್ ಹಾಸನ್, ಕಾವೇರಿ ವಿಷಯದಲ್ಲಿ ಕರ್ನಾಟಕವನ್ನು ಟೀಕಿಸಿದ್ದಾರೆ.
ಶನಿವಾರ ಸುದ್ದಿಗಾರರು ‘ಕೇರಳ ಸರ್ಕಾರ ಶಬರಿಮಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶ ಪಾಲಿಸುತ್ತಿಲ್ಲವೇ’ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕಮಲ್, ‘ಕೇರಳ ಸರ್ಕಾರ ಸುಪ್ರೀಂ ಆದೇಶ ಗೌರವಿಸುತ್ತಿದೆ. ಆದರೆ ಕರ್ನಾಟಕದ ವಿಚಾರಕ್ಕೆ ಬಂದಾಗ ಕರ್ನಾಟಕ ಸರ್ಕಾರವೇ ಕಾವೇರಿ ವಿಷಯದಲ್ಲಿ ಕೋರ್ಟ್ ಆದೇಶ ಗೌರವಿಸುತ್ತಿಲ್ಲ. ಕೇರಳದ ವಿಚಾರದಲ್ಲಿ ಜನರು ಕೋರ್ಟ್ ಆದೇಶ ಗೌರವಿಸುತ್ತಿಲ್ಲ. ಎರಡಕ್ಕೂ ವ್ಯತ್ಯಾಸವಿದೆ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.