35 ವರ್ಷದ ಸಿನಿಮಾ ಕೃಷಿ ಒಂದೇ ದಿನದಲ್ಲಿ ಹಾಳು ಮಾಡಿದ ಶೃತಿ

Published : Oct 24, 2018, 03:05 PM IST
35 ವರ್ಷದ ಸಿನಿಮಾ ಕೃಷಿ ಒಂದೇ ದಿನದಲ್ಲಿ ಹಾಳು ಮಾಡಿದ ಶೃತಿ

ಸಾರಾಂಶ

ಅರ್ಜುನ್‌ರನ್ನು ಮಾನಸಿಕವಾಗಿ ಕೊಲೆ ಮಾಡಿದ ಹಾಗೆ ಎಂದು ಛೇಡಿಸಿದರು. ಹೆಣ್ಣು ಮಕ್ಕಳು ಸಿನಿಮಾಗೆ ಬಂದ್ರೆ ನಟನೆ ಮಾಡಬೇಕು. ಸಿನಿಮಾ ಅನ್ನೋದು ಗಂಧರ್ವ ವಿದ್ಯೆ. ಬಹುಭಾಷಾ ನಟ ಪ್ರಕಾಶ್ ರೈ ಕೂಡಾ ಒಬ್ಬ ಜಂಟಲ್ ಮನ್. ಅವರು ಬಿಡಿ, ದೇಶದ ಮಹಾನ್ ನಾಯಕ. ಜನರಿಗೆ ತೊಂದರೆ ಆದರೆ ಅವರ ಸಮಸ್ಯೆಗೆ ಬರ್ತಾರೆ. ಸರ್ಜಾ ಸ್ಲಂ ನಿಂದ ಬಂದಿರೋರು, ರೈ ದೇವಲೋಕದಿಂದ ಬಂದಿದ್ದಾರೆ ನೋಡಿ ಎಂದು ಜಗ್ಗೇಶ್ ರೈ ಕಾಲೆಳೆದರು.

ಮಂಡ್ಯ(ಅ.24): ಶೃತಿ ಹರಿಹರನ್ ಅರ್ಜುನ್ ಸರ್ಜಾ ವಿರುದ್ಧವಾಗಿ ಮಾಡಿರುವ ಮೀಟೂ ಆರೋಪದ ಹಿಂದೆ ರಾಜಕೀಯ ಅಡಗಿದೆ ಎಂದು ಹಿರಿಯ ನಟ ಜಗ್ಗೇಶ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಜಗ್ಗೇಶ್, ನಾನು ಅರ್ಜುನ್ ಪರ. ಒಂದು ವೇಳೆ ಅಂತಹ ಘಟನೆ ನಡೆದಿದ್ದರೆ ಶೃತಿ ಹರಿಹರನ್ ತಕ್ಷಣ ಪ್ರತಿ ಕ್ರಿಯೆ ವ್ಯಕ್ತಪಡಿಸಬೇಕಿತ್ತು. ಅರ್ಜುನ್ ವಿಚಾರದಲ್ಲಿ ಶೃತಿ ತಪ್ಪು ಮಾಡಿದ್ದಾರೆ. ಇದೊಂದು ಆಂದೋಲನದ ಮಟ್ಟಕ್ಕೆ ಹೋಗಿದೆ ಎಂದರೆ ಈ ಪ್ರಕರಣದಲ್ಲಿ ಏನೋ ಇದೆ. ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ ಎಂದು ಅರ್ಥ ಎಂದರು.

ಅರ್ಜುನ್ ಸರ್ಜಾ ಮಹಾನ್ ಸಾದ್ವಿ, ಸುಸಂಸ್ಕೃತ, ಏಕ ವಚನದಲ್ಲೂ ಮಾತನಾಡುವ ವ್ಯಕ್ತಿ ಅಲ್ಲ. ಡಾ.ರಾಜ್, ಡಾ.ವಿಷ್ಣು ಬಿಟ್ರೆ ಸರಳತೆ ಮೈಗೂಡಿಸಿಕೊಂಡಿರುವ ಜಂಟಲ್ ಮನ್ ಎಂದರೆ ಅರ್ಜುನ್. ಅರ್ಜುನ್ 35 ವರ್ಷದ ಸಿನಿಮಾ ಕೃಷಿ ಮಾಡಿದ್ದಾರೆ. ಅದನ್ನು ಈ ಶೃತಿ ಒಂದೇ ದಿನಕ್ಕೆ ಹಾಳು ಮಾಡಿದ್ದಾರೆ. ಅರ್ಜುನ್‌ರನ್ನು ಮಾನಸಿಕವಾಗಿ ಕೊಲೆ ಮಾಡಿದ ಹಾಗೆ ಎಂದು ಛೇಡಿಸಿದರು. ಹೆಣ್ಣು ಮಕ್ಕಳು ಸಿನಿಮಾಗೆ ಬಂದ್ರೆ ನಟನೆ ಮಾಡಬೇಕು. ಸಿನಿಮಾ ಅನ್ನೋದು
ಗಂಧರ್ವ ವಿದ್ಯೆ. ಬಹುಭಾಷಾ ನಟ ಪ್ರಕಾಶ್ ರೈ ಕೂಡಾ ಒಬ್ಬ ಜಂಟಲ್ ಮನ್. ಅವರು ಬಿಡಿ, ದೇಶದ ಮಹಾನ್ ನಾಯಕ. ಜನರಿಗೆ ತೊಂದರೆ ಆದರೆ ಅವರ ಸಮಸ್ಯೆಗೆ ಬರ್ತಾರೆ. ಸರ್ಜಾ ಸ್ಲಂ ನಿಂದ ಬಂದಿರೋರು, ರೈ ದೇವಲೋಕದಿಂದ ಬಂದಿದ್ದಾರೆ ನೋಡಿ ಎಂದು ಜಗ್ಗೇಶ್ ರೈ ಕಾಲೆಳೆದರು.

ಚಿತ್ರರಂಗದಲ್ಲಿ ನಟರು ಕಳ್ಳ, ವೇಶ್ಯೆ ಹೀಗೆ ನಾನಾ ಪಾತ್ರ ಮಾಡಬೇಕು. ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಬೇಕು. ನಾನೆಂದು ಸ್ತ್ರೀ ಪರ. ಚಿತ್ರರಂಗದಲ್ಲಿ ಹೆಣ್ಣು ಮಕ್ಕಳಿಗೆ ಹಿಂಸೆ ಕೊಟ್ರೆ ಮೊಬೈಲ್‌ನಲ್ಲಿ ಆನ್‌ಲೈನ್ ಲೈವ್ ಮಾಡಿ ತೋರಿಸಿ, ಪೊಲೀಸ್ ಅಧಿಕಾರಿಗಳನ್ನು ಟ್ಯಾಗ್ ಮಾಡಬೇಕು. ಇಲ್ಲ ಚಲನಚಿತ್ರ ವಾಣಿಜ್ಯ ಮಂಡಳಿಗಾದರೂ ದೂರು ಕೊಡಿ. ಘಟನೆ ನಡೆದಾಗ ಪ್ರತಿಕ್ರಿಯಿಸದೇ ಈಗ ಮಾಡೋದು ಸರೀನಾ....? ಸಿನಿಮಾದವ್ರಿಗೆ ಜನ ಬಾಡಿಗೆ ಮನೆ ಕೊಡ್ತಿಲ್ಲ ಯಾಕೆ ಹೇಳಿ ಎಂದು ಮರು ಪ್ರಶ್ನೆ ಮಾಡಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಲವ್ ಮಾಡು, ಇಲ್ಲಾಂದ್ರೆ ಸಾಯ್ತೀನಿ: ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಕಿರುಕುಳ ಕೊಟ್ಟ ಖತರ್ನಾಕ್ ಲೇಡಿ
ಸರ್ಕಾರಿ ನೇಮಕಾತಿ ವಿಳಂಬ: ಮನನೊಂದು ಧಾರವಾಡ ರೈಲು ಹಳಿಗೆ ಸಿಲುಕಿ ಯುವತಿ ದಾರುಣ ಸಾವು!