
ನವದೆಹಲಿ (ಫೆ. 28): ಬಾಲಿವುಡ್ ’ಚಾಂದನಿ’ ಶ್ರೀದೇವಿಯ ಬಾಳ ಪಯಣ ಮುಕ್ತಾಯಗೊಂಡಿದೆ. ಇನ್ನು ಕೆಲವೇ ಹೊತ್ತಿನಲ್ಲಿ ಪಂಚಭೂತಗಳಲ್ಲಿ ಲೀನವಾಗಲಿದ್ದಾರೆ ಅತಿಲೋಕ ಸುಂದರಿ. ಅಂತಿಮ ಸಂಸ್ಕಾರ ಇನ್ನು ಕೆಲವೇ ಕ್ಷಣಗಳಲ್ಲಿ ನಡೆಯಲಿದೆ.ವಿಲೇ ಪಾರ್ಲೆ ಸೇವಾ ಸಮಾಜ ಚಿತಾಗಾರದಲ್ಲಿ ನಡೆಯಲಿದೆ.
ಪತಿ ಬೋನಿ ಕಪೂರ್, ಮಗಳು ಜಾಹ್ನವಿ, ಖುಷಿ ಸೇರಿದಂತೆ ಕುಟುಂಬದವರು, ಬಾಲಿವುಡ್ ನಟ, ನಟಿಯರು ಎಲ್ಲರೂ ಸ್ಥಳದಲ್ಲಿ ನೆರೆದಿದ್ದಾರೆ. ಅಯ್ಯಂಗಾರ್ ಪ್ರಕಾರ ಅಂತಿಮ ವಿಧಿ ವಿಧಾನ ನಡೆಯಲಿದೆ. ಪಾರ್ಥಿವ ಶರೀರಕ್ಕೆ ತ್ರಿವರ್ಣ ಧ್ವಜ ಹೊದಿಸಿ ಸಕಲ ಸರ್ಕಾರಿ ಗೌರವ ನೀಡಲಾಯಿತು. ಶ್ರೀದೇವಿಯವರ ಅಚ್ಚುಮೆಚ್ಚಿನ ಕೆಂಪು ಬಣ್ಣದ ಕಾಂಜೀವರಂ ಸೀರೆಯನ್ನು ಹೊದಿಸಲಾಗಿದೆ. ಹಣೆಗೆ ಕೆಂಪು ಕುಂಕುಮ, ಕೊರಳಿಗೆ ಮುತ್ತಿನ ಹಾರ, ಮುಡಿಯಲ್ಲಿ ಮಲ್ಲಿಗೆ ಹೂವಿನ ಮಾಲೆ, ತುಟಿಗೆ ಕೆಂಪು ಬಣ್ಣದ ಲಿಪ್ಸ್ಟಿಕ್, ಕೊರಳಲ್ಲಿ ಮಾಂಗಲ್ಯ ಸರ ಹಾಕಿ ಸಿಂಗರಿಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.