
ನಲ್ಲೂರು(ಮೇ.02): ಐಎಎಸ್ ಅಧಿಕಾರಿಗಳು ತಮ್ಮ ಪೂರ್ಣ ಸೇವೆ ಮುಗಿದ ನಂತರ ಕೋಟಿ ರೂ.ಗಳನ್ನು ಉಳಿಸುವುದು ಅಪರೂಪ. ಆದರೆ ಇಲ್ಲೊಬ್ಬ ಸರ್ಕಾರಿ 4ನೇ ದರ್ಜೆಯ ಅಟೆಂಡರ್ ಒಬ್ಬ ತಮ್ಮ 34 ವರ್ಷಗಳ ಸೇವೆಯಲ್ಲಿ ಅಂದಾಜು 80 ಕೋಟಿ ರೂ. ಆಸ್ತಿ ಸಂಪಾದಿಸಿದ್ದಾನೆ.
ಆಂಧ್ರಪ್ರದೇಶದ ನಲ್ಲೂರು ಜಿಲ್ಲೆಯ ಗುಂಡಾಲಪಲಂ ಗ್ರಾಮದಲ್ಲಿ ವಾಸವಾಗಿರುವ ಕೆ. ನರಸಿಂಹ ರೆಡ್ಡಿ(55) ಎಂಬಾತ ಕೋಟಿಗಟ್ಟಲೆ ಆಸ್ತಿ ಸಂಪಾದಿಸಿದ್ದಾನೆ. ರೆಡ್ಡಿ ಸಾರಿಗೆ ಇಲಾಖೆಯಲ್ಲಿ 1984 ರಲ್ಲಿ ಅಟೆಂಡರ್ ಆಗಿ ಕೆಲಸಕ್ಕೆ ಸೇರಿಕೊಂಡ ಆದರೆ ಇಲ್ಲಿಯವರೆಗೂ ಬಡ್ತಿ ದೊರೆಕಿಲ್ಲ. ಇದಕ್ಕೆಲ ಕಾರಣ ಈತನ ಬ್ರಹ್ಮಾಂಡ ಭ್ರಷ್ಟಾಚಾರ.
ಭ್ರಷ್ಟಾಚಾರ ವಿರೋಧಿ ದಳ(ಎಸಿಬಿ) ಈತನ ಮನೆಯ ಮೇಲೆ ದಾಳಿ ನಡೆಸಿದಾಗ 18 ಪ್ಲಾಟ್'ಗಳು, ಜಿ+ ಪೆಂಟ್ ಹೌಸ್, 50 ಎಕರೆ ಕೃಷಿ ಭೂಮಿ,2 ಕೆಜಿ ಚಿನ್ನ, 7 ಕೆಜಿ ಬೆಳ್ಳಿ ಪಾತ್ರೆಗಳು, 20 ಲಕ್ಷ ಬ್ಯಾಂಕ್ ಬ್ಯಾಲೆನ್ಸ್, 1 ಕೊಟಿಗೂ ಹೆಚ್ಚು ಜೀವ ವಿಮಾ ಪಾಲಿಸಿ ಸೇರಿದಂತೆ ಸ್ಥಿರಾಸ್ತಿ ಹಾಗೂ ಚರಾಸ್ತಿಗಳು ಪತ್ತೆಯಾಗಿವೆ. ಸದ್ಯ ರೆಡ್ಡಿಯನ್ನು ಬಂಧಿಸಿರುವ ಎಸಿಬಿ ತನಿಖೆ ಮುಂದುವರಿಸಿದ್ದಾರೆ.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.