ಯೋಧನ ಹತ್ಯೆಕೋರರ ಹತ್ಯೆಗೆ ತಂದೆಯಿಂದ 3 ದಿನದ ಗಡುವು

Published : Jun 16, 2018, 09:36 AM IST
ಯೋಧನ ಹತ್ಯೆಕೋರರ ಹತ್ಯೆಗೆ ತಂದೆಯಿಂದ 3 ದಿನದ ಗಡುವು

ಸಾರಾಂಶ

ಕಾಶ್ಮೀರದ ಶೋಪಿಯಾನ್‌ನಲ್ಲಿ ಯೋಧ ಔರಂಗಜೇಬ್‌ ಅವರನ್ನು ಅಪಹರಣಗೈದು ಹತ್ಯೆಗೈದ ಉಗ್ರರನ್ನು 3 ದಿನಗಳಲ್ಲಿ ಪತ್ತೆ ಹಚ್ಚಿ ಕೊಲ್ಲಬೇಕು ಎಂದು ಹುತಾತ್ಮ ಯೋಧನ ತಂದೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.   

ಜಮ್ಮು: ಕಾಶ್ಮೀರದ ಶೋಪಿಯಾನ್‌ನಲ್ಲಿ ಯೋಧ ಔರಂಗಜೇಬ್‌ ಅವರನ್ನು ಅಪಹರಣಗೈದು ಹತ್ಯೆಗೈದ ಉಗ್ರರನ್ನು 3 ದಿನಗಳಲ್ಲಿ ಪತ್ತೆ ಹಚ್ಚಿ ಕೊಲ್ಲಬೇಕು ಎಂದು ಹುತಾತ್ಮ ಯೋಧನ ತಂದೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. 

ಶುಕ್ರವಾರ ಮಾಧ್ಯಮಗಳ ಜತೆ ಮಾತನಾಡಿದ ಯೋಧ ಔರಂಗಜೇಬ್‌ ಅವರ ದುಃಖತಪ್ತ ತಂದೆ, ನನ್ನ ಮಗನ ಪುತ್ರನ ಸಾವಿಗೆ ಕಾರಣರಾದವರನ್ನು ಶಿಕ್ಷಿಸಲು ಸರ್ಕಾರಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ. ಮುಂದಿನ 72 ಗಂಟೆಯಲ್ಲಿ ನನ್ನ ಮಗನ ಕೊಂದವರನ್ನು ಸರ್ಕಾರ ಪತ್ತೆ ಹಚ್ಚಿ ಕೊಲ್ಲದಿದ್ದರೆ, ನನ್ನ ಮಗನ ಸಾವಿಗೆ ನಾನೇ ಸೇಡು ತೀರಿಸಿಕೊಳ್ಳುವುದಾಗಿ,’ ಹೇಳಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಹುತಾತ್ಮರಾದ ಯೋಧರ ವಿಚಾರದಲ್ಲಿಯೂ ರಾಜಕೀಯ ಮಾಡುತ್ತಿರುವ ಮತ್ತು ಪ್ರತ್ಯೇಕತಾವಾದಿ ಮುಖಂಡರ ಕಾಶ್ಮೀರದಿಂದ ಹೊರ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಔರಂಗಜೇಬ್‌ ಸಾವು ಕೇವಲ ನಮ್ಮ ಕುಟುಂಬಕ್ಕೆ ಆಗಿರುವ ನಷ್ಟವಲ್ಲ. ಬದಲಿಗೆ ಭಾರತದ ಸೇನೆ ಮತ್ತು ಜಮ್ಮು-ಕಾಶ್ಮೀರಕ್ಕೆ ಆಗಿರುವ ನಷ್ಟಎಂದು ಅವರು ಕಣ್ಣೀರು ಹಾಕಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ : ಇಂದು ನಿರ್ಧಾರ
ಸ್ಫೋಟಕ ಇರುವ ಶಂಕೆ : ಲಂಡನ್‌ನಲ್ಲಿ ಪಾಕ್‌ ಸಚಿವ ಕಾರು ತಪಾಸಣೆ