
ಬೀಜಿಂಗ್: ಒಂದೇ ಮಗುವಿನ ನೀತಿ ತೆಗೆದರೂ, ಚೀನಾದಲ್ಲಿ ಮಗುವನ್ನು ಹೆರುವುದೇ ಒಂದು ಸಂಭ್ರಮ. ಇಂಥ ಪರಿಸ್ಥಿತಿ ಇರುವ ಚೀನಾದ ಕಸದ ತೊಟ್ಟಿಯಲ್ಲೊಂದು ನವ ಜಾತ ಹೆಣ್ಣು ಶಿಶು ಸಿಕ್ಕಿದೆ. ಸುಮಾರು ಆರು ಆಡಿ ಎತ್ತರದಿಂದ ಎಸೆದ ಈ ಮಗುವಿನ ಹೊಕ್ಕಳು ಬಳಿಯೂ ಹಾಗೆಯೇ ಇತ್ತು. ತುಸು ಪೆಟ್ಟಾಗಿದ್ದರೂ, ಅದೃಷ್ಟವಶಾತ್ ಮಗು ಬದುಕಿದೆ. ಚೀನಾದ ಪುಟ್ಟ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ.
ಈ ಮುದ್ದಾದ ಮಗುವನ್ನು ಕಸದ ತೊಟ್ಟಿಯಂತಿರುವ ಜಾಗದಲ್ಲಿ ಎಸೆಯಲು ಪೋಷಕರಿಗೆ ಹೇಗೆ ಮನಸು ಬಂತೋ ಗೊತ್ತಿಲ್ಲ. ವಿಪರೀತ ಗಾಯಗೊಂಡ ಮಗುವನ್ನು ಪೊಲೀಸರ ಸಹಾಯದಿಂದ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಗುವಿನ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಹಲವಾರು ಮಗುವನ್ನು ದತ್ತು ಪಡೆಯಲು ಮುಂದಾಗಿದ್ದಾರೆ. ಆದರೆ, ಪೊಲೀಸರು ಮಗುವಿನ ಪೋಷಕರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಹೃದಯ, ಶ್ವಾಸಕೋಶಗಳಿಗೂ ಪೆಟ್ಟು ಬಿದ್ದಿದ್ದು, ಮಗು ಇದೀಗ ಚೇತರಿಸಿಕೊಳ್ಳುತ್ತಿದೆ, ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.