
ನವದೆಹಲಿ (ಅ. 27): ಇತ್ತೀಚಿನ ಸುಪ್ರೀಂ ಕೋರ್ಟ್ ಆದೇಶಾನುಸಾರ ಯಾವುದೇ ಟೆಲಿಕಾಂ ಕಂಪನಿಗಳು ಹಾಲಿ ಮೊಬೈಲ್ ಚಂದಾದಾರರು ಹಾಗೂ ಹೊಸ ಚಂದಾದಾರರಿಗೆ ‘ಆಧಾರ್ ದೃಢೀಕರಣ’ ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಇದರಿಂದಾಗಿ ಬೆರಳಚ್ಚು ಮೂಲಕ ಆಧಾರ್ ದೃಢೀಕರಣ ಮಾಡು ವುದಕ್ಕೆ ಮೊಬೈಲ್ ಕಂಪನಿಗಳಿಗೆ ಸರ್ಕಾರ ನಿರ್ಬಂಧ ಹೇರಿದಂತಾಗಿದೆ. ಆದರೆ, ಚಂದಾದಾರರು ತಮ್ಮ ವಿಳಾಸ ಹಾಗೂ ಗುರುತು ದೃಢೀಕರಣಕ್ಕಾಗಿ ಆಧಾರ್ ಕಾರ್ಡನ್ನು ಕಂಪನಿಗಳಿಗೆ ಸ್ವಯಂಪ್ರೇರಿತವಾಗಿ ನೀಡಬಹುದು. ಕಂಪನಿಗಳು ಕಾರ್ಡನ್ನು ಸ್ವೀಕರಿಸಬಹುದು.
ಆದಾಗ್ಯೂ, ಮೊಬೈಲ್ ಕಂಪನಿಗಳು ಸಿಮ್ ಖರೀದಿಸುವ ಗ್ರಾಹಕರ ಆಧಾರ್ ಬೆರಳಚ್ಚು ದೃಢೀಕರಣವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಶುಕ್ರವಾರ ಕೇಂದ್ರ ಸರ್ಕಾರ ಆದೇಶಿಸಿದೆ. ಇದೇ ವೇಳೆ ಸುಪ್ರೀಂ ಕೋರ್ಟ್ ಆದೇಶಕ್ಕೆ ಬದ್ಧರಾಗಿ
ರುವುದಾಗಿ ಸರ್ಕಾರಕ್ಕೆ ಮೊಬೈಲ್ ಆಪರೇಟರ್ ಕಂಪನಿಗಳು ನವೆಂಬರ್ 5 ರ ಒಳಗಾಗಿ ಅನುಸರಣಾ ಪತ್ರ ನೀಡಬೇಕು ಎಂದು ಸಹ ಸೂಚಿಸಲಾಗಿದೆ.
ಈ ಕುರಿತು 3 ಪುಟಗಳ ಸುತ್ತೋಲೆಯನ್ನು ಹೊರಡಿಸಿರುವ ಟೆಲಿಕಾಂ ಇಲಾಖೆ, ಹೊಸ ಗ್ರಾಹಕರ ಆಧಾರ್ ಪಡೆಯದಂತೆ ಸೂಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.