
ಮೈಸೂರು(ಜ.10): ನಂಜನಗೂಡು ಬೈ ಎಲೆಕ್ಷನ್ ರಾಜ್ಯ ಸರ್ಕಾರಕ್ಕೆ ಪ್ರತಿಷ್ಟೆಯ ಪಣವಾಗಿ ಬಿಟ್ಟಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಬಹಿರಾಂಗವಾಗಿ ತೊಡೆ ತಟ್ಟಿ ಹೊರ ಬಂದ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನ ಹೇಗಾದರೂ ಸರಿ ಬಗ್ಗು ಬಡಿಯಬೇಕು ಅಂತ ಸಿಎಂ ನಿಂತಿದ್ದಾರೆ. ಹಳೆಯ ಗಿಮಿಕ್ ಒಂದನ್ನು ಮತ್ತೆ ಚಲಾವಣೆ ಮಾಡುತ್ತಿರುವ ರಾಜ್ಯ ಸರ್ಕಾರ, ಚುನಾವಣೆ ನಿಗಧಿಗೂ ಮುನ್ನ ಮತದಾರರನ್ನು ಸೆಳೆಯಲು ನಡೆಸಿರುವ ಕಾರ್ಯತಂತ್ರ ಎಂತದ್ದು ಎಂಬುದನ್ನು ಸುವರ್ಣ ನ್ಯೂಸ್ ಬಯಲು ಮಾಡಿದೆ.
ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಕಿರು ಸಾಲ ಯೋಜನೆಯಡಿ. 15 ಸಾವಿರ ಸಾಲ ಅದರಲ್ಲಿ 5 ಸಾವಿರ ಸಬ್ಸಿಡಿ. ಹೀಗಿದ್ದ ಮೇಲೆ ಜನ ಬಿಡುತ್ತಾರಾ? ಮುಗಿಬಿದ್ದಿದ್ದಾರೆ. ನಂಜನಗೂಡು ಕ್ಷೇತ್ರದ ಉಪ ಚುನಾವಣೆ ಘೋಷಣೆಗೂ ಮುನ್ನವೇ ಮತದಾರರ ಓಲೈಕೆಗೆ ಕಸರತ್ತು ಇದು. ಇಂಥದ್ದೊಂದು ಮಾಸ್ಟರ್ ಪ್ಲಾನ್ ಸರ್ಕಾರ ರೂಪಿಸಿದೆ ಎನ್ನುವುದನ್ನು ಸುವರ್ಣ ನ್ಯೂಸ್ ಕೆಲ ದಿನಗಳ ಹಿಂದೆ ವರದಿ ಮಾಡಿತ್ತು. ಅದು ಈಗ ಹೊರಬಿದ್ದಿದೆ.
ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರನ್ನು ಬಳಸಿಕೊಂಡು ಸರ್ಕಾರದ ವಿವಿಧ ಅಭಿವೃದ್ಧಿಚ ನಿಯಮಗಳಿಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಾಲ ವಿತರಣೆಗೆ ತಯಾರಿಸಿದ್ದ ಪಟ್ಟಿಯೊಂದನ್ನು ಆಧರಿಸಿ, ಅಂಥವರ ಮನೆಗೆ ನೇರವಾಗಿ ಅರ್ಜಿಗಳನ್ನು ಅಂಚೆ ಮೂಲ್ಕ ಕಳುಹಿಸಲಾಗಿತ್ತು. ಅರ್ಜಿ ಪಡೆದ ನಂಜನಗೂಡು ಕ್ಷೇತ್ರದ ಫಲಾನುಭವಿಗಳೀಗ 50 ರೂಪಾಯಿ ಛಾಪಾ ಕಾಗದದ ಅಫಿಡವಿಟ್ ಜೊತೆಗೆ ಮೈಸೂರಿಗೆ ಬಂದು ಅರ್ಜಿ ಸಲ್ಲಿಸಲು ಮುಗಿಬಿದ್ದಿದ್ದಾರೆ.
ಅರ್ಜಿ ಸ್ವೀಕರಿಸುತ್ತಿರುವ ಕೇಂದ್ರದಲ್ಲಿ ನಾಮಫಲಕವಾಗಲಿ. ಯಾವ ಯೋಜನೆಯಡಿ, ಯಾವ ಇಲಾಖೆ ಕಾರ್ಯಕ್ರಮ ಎನ್ನುವ ಸಣ್ಣ ಸುಳಿವೂ ಇಲ್ಲ. 10 ವರ್ಷಗಳ ಹಿಂದೆ ಚಾಮುಂಡೇಶ್ವರಿ ಕ್ಷೇತ್ರದ ಬೈ ಎಲೆಕ್ಷನ್ನಲ್ಲಿ ಸಿದ್ದರಾಮಯ್ಯ ಮಣಿಸಲು ಎಚ್ಡಿಕೆ ಈ ತಂತ್ರ ಮಾಡಿದ್ದರು. ಶ್ರೀನಿವಾಸ್ ಪ್ರಸಾದ್ ಮಣಿಸಲು ಇದೀಗ ಸಿದ್ದರಾಮಯ್ಯ ಈ ತಂತ್ರ ಅನುಸರಿಸುತ್ತಿದ್ದಾರೆ. ಇದೆಲ್ಲಾ ಉಪಯೋಗವಾಗುತ್ತಾ ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.