
ಚಿಕ್ಕಮಗಳೂರು(ಜೂ.09): ಪೊಲೀಸ್ ಅಂದರೆ ಖಡಕ್ ಮೈಕಟ್ಟು. ಎತ್ತರದ ದೇಹ ಹೊಂದಿರಬೇಕು, ಆದರೆ ನಮ್ಮಲ್ಲಿ ಸಾಕಷ್ಟು ಜನ ಪೊಲೀಸರು ತಮ್ಮ ದೇಹದ ಬಗ್ಗೆ ಖಾಳಜಿ ವಹಿಸದೇ ಹೊಟ್ಟೆಬಿಟ್ಟುಕೊಂಡಿರುವವರೇ ಹೆಚ್ಚು. ಇಂತಹ ಹೊಟ್ಟೆ ಬಿಟ್ಟುಕೊಂಡಿದ್ದ ಪೊಲೀಸ್ ಸಿಬ್ಬಂದಿಗಳಿಗೆ ಆರು ತಿಂಗಳ ಹಿಂದೆ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ 5 ಕೆ.ಜಿ. ಇಳಿಸಿಕೊಂಡರೆ ಕೇಳಿದ ಕಡೆಗೆ ವರ್ಗಾವಣೆ ಮಾಡುವುದಾಗಿ ಆಫರ್'ವೊಂದನ್ನ ನೀಡಿದ್ದರು. 5 ಕೆ.ಜಿ. ತೂಕ ಇಳಿಸಿಕೊಳ್ಳುವಲ್ಲಿ ಚಿಕ್ಕಮಗಳೂರಿನ 16 ಜನ ಪೊಲೀಸರು ಯಶಸ್ವಿಯಾಗಿದ್ದು ಕೇಳಿದ ಠಾಣೆಗೆ ವರ್ಗಾವಣೆಯಾಗಿದ್ದಾರೆ.
ಅಣ್ಣಾ ಮಲೈ ಚಿಕ್ಕಮಗಳೂರು ಖಡಕ್ ಎಸ್ಪಿ. ಭ್ರಷ್ಟರ ಪಾಲಿಗೆ ಸಿಂಹ ಸ್ವಪ್ನವಾಗಿರುವ ಎಸ್'ಪಿ ಅಣ್ಣಾ ಮಲೈ. ಜನಸಾಮಾನ್ಯರಿಗೆ ಹಾಗೂ ಸಿಬ್ಬಂದಿ ಪಾಲಿಗೆ ಸ್ನೇಹ ಜೀವಿ. ಹಿಂದೊಮ್ಮೆ ಆರಕ್ಷಕರ ವಿರುದ್ಧವೇ ತಿರುಗಿಬಿದ್ದ ಪುಂಡರಿಗೆ ಖಡಕ್ ವಾರ್ನ್ ಮಾಡಿ ಸುದ್ದಿಯಾಗಿದ್ದ ಅಣ್ಣಾ ಮಲೈ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅದು ಸಿಬ್ಬಂದಿ ವರ್ಗಾವಣೆ ವಿಚಾರದಲ್ಲಿ.
ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಸಿಕ್ಕಾಪಟ್ಟೆ ಆಕ್ಟೀವಾಗೇ ಇರಬೇಕು. ಆದರೆ, ದೊಡ್ಡ ದೊಡ್ಡ ಹೊಟ್ಟೆ ಬೆಳೆಸಿಕೊಂಡ ಕಾಕಿ ವಾಲಾಗಳೇ ಹೆಚ್ಚಾಗಿವೆ. ಇಂಥವರನ್ನೆಲ್ಲ ಮತ್ತೊಮ್ಮೆ ಆಕ್ಟೀವಾಗಿಸಲು ಬಾಡಿ ಫಿಟ್ ಮಾಡಿಸಲು ಹೊಸ ಆಫರ್'ವೊಂದನ್ನ ನೀಡಿದ್ದರು. ತೂಕ ಇಳಿಸಿಕೊಂಡವರಿಗೆ ಕೇಳಿದ ಕಡೆ ವರ್ಗಾವಣೆ ಮಾಡಿಕೊಡೋ ಆಫರ್ ಕೊಟ್ಟಿದ್ದರು. 6 ತಿಂಗಳ ಹಿಂದೆ ಎಸ್'ಪಿ ಅಣ್ಣಾ ಮಲೈ ನೀಡಿದ್ದ ಆಫರ್ ಸ್ವೀಕರಿಸಿದ 16 ಮಂದಿ ತೂಕ ಇಳಿಸಿಕೊಂಡು ಎಸ್'ಪಿ ಪ್ರೀತಿಗೆ ಪಾತ್ರರಾಗಿದ್ದಾರೆ.
ಒಟ್ಟು 34 ಮಂದಿ ಪೊಲೀಸರು ತೂಕ ಇಳಿಸಿಕೊಳ್ಳಲು ಹೆಸರನ್ನು ನೊಂದಾಯಿಸಿದ್ದರು. ಸದ್ಯ ಎಎಸ್ಐ, ಹೆಡ್ ಕಾನ್ಸ್ಟೇಬಲ್ಗಳು ಸೇರಿದಂತೆ 16 ಮಂದಿ 5 ಕೆ.ಜಿ ಗೂ ಅಧಿಕ ತೂಕ ಇಳಿಸಿಕೊಂಡಿದ್ದಾರೆ. ಎಸ್ಪಿಯವರು ತಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.
ಒಟ್ಟಾರೆ, ಪೊಲೀಸ್ ಇಲಾಖೆಯನ್ನು ಮತ್ತಷ್ಟು ಆಕ್ಟೀವಾಗಿಸಲು ಹೊರಟ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಹೊಸ ಪ್ರಯೋಗವೊಂದಕ್ಕೆ ಕೈ ಹಾಕಿ ಯಶಸ್ಸು ಕಂಡಿದ್ದಾರೆ. ಇದೇ ರೀತಿ ಉಳಿದ ಜಿಲ್ಲೆಯ ಎಸ್ಪಿಗಳು ತಮ್ಮ ಸಿಬ್ಬಂದಿ ಫಿಟ್ನೆಸ್ ಬಗ್ಗೆ ಗಮನ ಕೊಟ್ಟಲ್ಲಿ. ಖಾಕಿ ಟೀಂ ಮತ್ತಷ್ಟು ಬಲಿಷ್ಟವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.