ಭಾರೀ ಭೂಕಂಪದಲ್ಲಿ 90 ಸಾವು : ಮತ್ತೆ ಸುನಾಮಿ ಎಚ್ಚರಿಕೆ

By Web DeskFirst Published Aug 6, 2018, 1:46 PM IST
Highlights

ಭಾರಿ ಭೂಕಂಪನದಿಂದ 91 ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೇ ಸಮುದ್ರದಲ್ಲಿ ಭಾರೀ ಅಲೆಗಳು ಏಳುತ್ತಿದ್ದು ಸುನಾಮಿ ಸಂಭವಿಸಬಹುದಾದ ಮುನ್ನೆಚ್ಚರಿಕೆ ನೀಡಲಾಗಿದೆ. 

ಜಾರ್ಖಂಡ್ : ಇಂಡೋನೇಷಿಯಾದಲ್ಲಿ ಸಂಭವಿಸಿದ ಭಾರೀ ಭೂಕಂಪದಿಂದ  91 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭಾನುವಾರ ರಾತ್ರಿ 9.1ರ ತೀವ್ರತೆಯಲ್ಲಿ ಭೂ ಕಂಪನ ಸಂಭವಿಸಿದ್ದು  ಇದರಿಂದ 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯು ರಭಸದಿಂದ ಸಾಗಿದೆ. 

ಭೀಕರ ಭೂಕಂಪನದಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಸುಟೋಪೊಪೂರ್ವಿ ನಗ್ರೋಹೋ ಪ್ರದೇಶದಲ್ಲಿ ಭೂ ಕಂಪನದ ಕೇಂದ್ರ ಬಿಂದು ಇರುವುದಾಗಿ ನೈಸರ್ಗಿಕ ವಿಕೋಪ ತಡೆ ಸಮಿತಿ ಹೇಳಿದೆ. 

ಅಲ್ಲದೇ ಸಮುದ್ರದ ಅಲೆಗಳು ಭಾರೀ ರಭಸದಿಂಧ ಅಪ್ಪಳಿಸುತ್ತಿದ್ದು  ಇನ್ನಷ್ಟು ಅನಾಹುತ ಸೃಷ್ಟಿಯಾಗಬಹುದಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸಮುದ್ರದಂಚಿನ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ.  ಅಲ್ಲದೇ ಭಾರಿ ಸುನಾಮಿ ಸಂಭವಿಸುವ ಬಗ್ಗೆಯೂ ಕೂಡ ಎಚ್ಚರಿಕೆ ನೀಡಲಾಗಿದೆ. 

 

click me!