
ಚೆನ್ನೈ[ಮಾ.07]: 9 ವರ್ಷದ ವಿದ್ಯಾರ್ಥಿನಿಯೊಬ್ಬಳು ತಾನು ಈವರೆಗೆ ಉಳಿಸಿದ ಸುಮಾರು 1.50 ಲಕ್ಷ ಮೊತ್ತವನ್ನು ಚೆನ್ನೈ ನಗರ ಪೊಲೀಸರಿಗೆ ದಾನಗೈದಿದ್ದಾಳೆ. ಈ ಹಣದಿಂದ ನಗರದೆಲ್ಲೆಡೆ ಸಿಸಿಟಿವಿ ಅಳವಡಿಸಲು ಮನವಿ ಮಾಡಿಕೊಂಡಿದ್ದಾಳೆ.
ಶ್ರೀಹಿತಾಳ ಈ ಕಾಳಜಿಯನ್ನು ನೋಡಿದ ನಗರ ಪೊಲೀಸ್ ಆಯುಕ್ತ ಎ. ಕೆ. ವಿಶ್ವನಾಥನ್ ಆಕೆಯನ್ನು ತನ್ನ ಕಚೇರಿಗೆ ಆಹ್ವಾನಿಸಿ ಪ್ರಶಂಸಿಸಿದ್ದಾರೆ. ಅಲ್ಲದೇ ಸುಸದ್ದಿಗೋಷ್ಟಿಯನ್ನು ಆಯೋಜಿಸಿ ಆ ಪುಟ್ಟ ಬಾಲಕಿಯ ಸಾಧನೆಯನ್ನು ಕೊಂಡಾಡಿದ್ದಾರೆ.
ಇಂತಹ ಒಂದು ಯೋಚನೆ ಆ ಪುಟ್ಟ ಬಾಲಕಿಗೆ ಎಲ್ಲಿಂದ ಬಂತು? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರಿಸಿರುವ ಶ್ರೀಹಿತಾ 'ನನ್ನ ತಂದೆಯ ಕಚೇರಿಯಲ್ಲಿ ಪೊಲೀಸರು ಸಿಸಿಟಿವಿ ಕ್ಯಾಮರಾದ ಉಪಯೋಗಗಳ ಬಗ್ಗೆ ಕಾರ್ಯಾಗಾರವನ್ನು ನಡೆಸಿದ್ದರು. ಇದನ್ನು ನೋಡಿದ ಬಳಿಕ ನನ್ನಲ್ಲಿರುವ ಹಣವನ್ನು ಸಿಸಿಟಿಗಾಗಿ ದಾನ ಮಾಡುವ ಯೋಚನೆ ಬಂತು' ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.