3 ವರ್ಷಗಳಿಂದ 80 ಸಾವಿರ ಭಾರತೀಯರ ರಕ್ಷಣೆ

By Suvarna Web DeskFirst Published Jun 5, 2017, 6:07 PM IST
Highlights

ಮೋದಿ ಸರ್ಕಾರದ 3 ವರ್ಷದ ಸಾಧನೆಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದೇಶಗಳಲ್ಲಿ ತೊಂದರೆಯಲ್ಲಿದ್ದ ಇಷ್ಟು ಜನರನ್ನು ಸುರಕ್ಷಿತವಾಗಿ ಕರೆತರಲು ಸಹಕರಲು ನೆರವಾದ  ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವರಾದ ನಿವೃತ್ತ ಜನರಲ್ ವಿ.ಕೆ ಸಿಂಗ್ ಮತ್ತು ಎಂ.ಜೆ. ಅಕ್ಬರ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ನವದೆಹಲಿ(ಜೂ.05) :ಕಳೆದ ಮೂರು ವರ್ಷಗಳಲ್ಲಿ ವಿದೇಶಗಳಿಂದ 80 ಸಾವಿರ ಭಾರತೀಯರನ್ನು ತಾಯ್ನಡಿಗೆ ಸುರಕ್ಷಿತವಾಗಿ ವಾಪಸ್ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ಮೋದಿ ಸರ್ಕಾರದ 3 ವರ್ಷದ ಸಾಧನೆಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದೇಶಗಳಲ್ಲಿ ತೊಂದರೆಯಲ್ಲಿದ್ದ ಇಷ್ಟು ಜನರನ್ನು ಸುರಕ್ಷಿತವಾಗಿ ಕರೆತರಲು ಸಹಕರಲು ನೆರವಾದ  ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವರಾದ ನಿವೃತ್ತ ಜನರಲ್ ವಿ.ಕೆ ಸಿಂಗ್ ಮತ್ತು ಎಂ.ಜೆ. ಅಕ್ಬರ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಸರ್ಕಾರ ಪಾಸ್'ಪೋರ್ಟ್ ನಿಯಮಗಳನ್ನು ಸಹ ಶೇ.50 ರಷ್ಟು ಸರಳೀಕೃತಗೊಳಿಸಿದೆ. ಅಲ್ಲದೆ  ವಿದೇಶ ನೀರ ಹೂಡಿಕೆ ಕಳೆದ ಮೂರು ವರ್ಷಗಳಲ್ಲಿ ಶೇ.37.7 ರಷ್ಟು ಹೆಚ್ಚಾಗಿದೆ. ಭಾರತ ಮತ್ತು ಅಮೆರಿಕಾ ಬಾಂಧವ್ಯಗಳ ಬಗ್ಗೆ ಮಾತನಾಡಿದ ಅವರು' ಅಮೆರಿಕಾ ಅಧ್ಯಕ್ಷ ಪ್ಯಾರಿಸ್ ಒಪ್ಪಂದ'ದಿಂದ ಹಿಂದೆ ಸರಿದರೂ ಎರಡೂ ದೇಶಗಳ ಸಂಬಂಧದಲ್ಲಿ ಯಾವುದೇ ಬದಲಾವಣೆ ಉಂಟಾಗುವುದಿಲ್ಲ. ಒಬಾಮ ಅವಧಿಯಲ್ಲಿ ಯಾವ ರೀತಿ ಸಂಬಂಧ ಸುಧಾರಣೆಗೆ ಒತ್ತು ನೀಡಲಾಗಿತ್ತೋ ಅದನ್ನೇ ಮುಂದುವರಿಸಿಕೊಂಡು ಹೋಗಲಾಗುವುದು ಎಂದು ತಿಳಿಸಿದರು.

click me!