
ಮೈಸೂರು: ಕೇಂದ್ರ ಸರ್ಕಾರದ ಗೋವುಗಳ ಮಾರಾಟ ನಿರ್ಬಂಧ ಕಾಯಿದೆಯನ್ನು ರಾಜ್ಯದಲ್ಲಿಯೂ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಮೈಸೂರಿನ ರಾಮಕೃಷ್ಣನಗರದಲ್ಲಿರುವ ಮುಖ್ಯಮಂತ್ರಿ ನಿವಾಸದೆದುರು ಗೋಪೂಜೆ ಮಾಡಲು ಮುಂದಾದ 8 ಮಂದಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಅಖಂಡ ಭಾರತ ಸೇವಾ ಸೇನಾ ಸಂಸ್ಥಾಪಕ ಚೇತನ್ ಮಂಜುನಾಥ್ ಮತ್ತು ಸಹಚರರು ಗೋಪೂಜೆ ನಡೆಸಲು ಮುಂದಾದವರು.
ಕೇಂದ್ರ ಸರ್ಕಾರ ದೇಶಾದ್ಯಂತ ಕಸಾಯಿಖಾನೆಗೆ ಗೋ ಮಾರಾಟವನ್ನು ನಿಷೇಧಿಸಿ ಕಾನೂನು ಹೊರಡಿಸಿದ್ದು, ಗೋವುಗಳ ರಕ್ಷಣೆಗೆ ಮುಂದಾಗಬೇಕಿದ್ದ ಸಿದ್ದರಾಮಯ್ಯ ಗೋಭಕ್ಷರಿಗೆ ರಕ್ಷಣೆ ಒದಗಿಸುತ್ತಿದ್ದಾರೆ ಎಂದು ಆರೋಪಿಸಿ ಗೋಪೂಜೆ ಮಾಡಲು ಮುಂದಾದರು. ಈ ವೇಳೆ ಪೊಲೀಸರು ಪೂರ್ವಾನುಮತಿ ಇಲ್ಲದೆ ಗೋಪೂಜೆ ಮಾಡುವುದು ತಪ್ಪು ಎಂದು ತಿಳಿಸಿ ಕಾರ್ಯಕರ್ತರನ್ನು ಬಂಧಿಸಿದರು.
ಪೊಲೀಸರು ಸ್ಥಳದಲ್ಲಿ ಬೆಳಗ್ಗಿನಿಂದಲೇ ನಾಕಾಬಂದಿ ರಚಿಸಿದ್ದರು. ಆದರೂ, ಚೇತನ್ ಮಂಜುನಾಥ್ ಮತ್ತಿತರರು ಸ್ಥಳಕ್ಕೆ ಗೋವು ಸಮೇತ ನುಗ್ಗಿದ್ದು, ಚೇತನ್ ಮಂಜುನಾಥ್ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿ ಡಿಆರ್ ಮೈದಾನಕ್ಕೆ ಕರೆದೊಯ್ದರು. ಕಾರ್ಯಕರ್ತರು ಕರೆತಂದಿದ್ದ ಗೋವನ್ನು ಮಾಲೀಕರಿಗೆ ಒಪ್ಪಿಸಲಾಯಿತು.
ಕನ್ನಡಪ್ರಭ ವಾರ್ತೆ
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.