
ನವದೆಹಲಿ : ಭಾರತದಿಂದ ವಿದೇಶಗಳಿಗೆ ವಲಸೆ ಹೋಗುವ ಶ್ರೀಮಂತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಿದೆ. 2017ನೇ ಇಸವಿಯಲ್ಲಿ ಒಟ್ಟು 7000 ಮಂದಿ ಮಿಲಿಯನೇರ್’ಗಳು ಭಾರತದಿಂದ ವಲಸೆ ಹೋಗಿದ್ದು ವಿಶ್ವದಲ್ಲಿ ವಲಸಿಗ ಮಿಲಿಯನೇರ್’ಗಳ ಸಂಖ್ಯೆಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ.
ಇನ್ನು ಚೀನಾ ಮೊದಲ ಸ್ಥಾನದಲ್ಲಿದ್ದು, ಕಳೆದ ವರ್ಷ ಚೀನಾದಿಂದ ಒಟ್ಟು 10,000 ಮಂದಿ ಮಿಲಿಯನೇರ್’ಗಳು ಬೇರೆ ಬೇರೆ ದೇಶಗಳಿಗೆ ವಲಸೆ ಹೋಗಿದ್ದಾರೆ. 2016ರಲ್ಲಿ ಭಾರತದಿಂದ ವಲಸೆ ಹೋದ ಮಿಲಿಯನೇರ್’ಗಳ ಸಂಖ್ಯೆ 6000 ಇದ್ದರೆ 2015ನೇ ಇಸವಿಯಲ್ಲಿ 4000 ಮಂದಿ ವಲಸೆ ಹೋಗಿದ್ದಾರೆ. ಇನ್ನು ಕಳೆದ ವರ್ಷ ಹೆಚ್ಚು ಶ್ರೀಮಂತರು ವಲಸೆ ಹೋದ ರಾಷ್ಟ್ರಗಳಲ್ಲಿ ಟರ್ಕಿ, ಯುಕೆ, ಫ್ರಾನ್ಸ್, ರಷ್ಯಾ ದೇಶಗಳೂ ಸೇರಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.