ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದವರ ಮೇಲೆ ಬಂಡೆ ಉರುಳಿ 7 ಸಾವು

By Kannadaprabha NewsFirst Published Jul 16, 2018, 12:02 PM IST
Highlights

ಮಳೆಗಾಲದಲ್ಲಿ ಜಲಪಾತಗಳನ್ನು ನೋಡಲು ಹೋಗುವುದು ಪ್ರವಾಸಿಗರಿಗೆ ಸಂತೋ ಷದ ವಿಷಯ. ಆದರೆ ಜಲಪಾತವೊಂದರಲ್ಲಿ ಭಾನುವಾರ ಸ್ನಾನಕ್ಕಿಳಿದವರ ಮೇಲೆ ಬೃಹತ್ ಬಂಡೆಯೊಂದು ಉರುಳಿದ ಪರಿಣಾಮ ಏಳು ಮಂದಿ ಮೃತಪಟ್ಟು, 30 ಮಂದಿ ಗಾಯಗೊಂಡಿದ್ದಾರೆ.

ಜಮ್ಮು: ಮಳೆಗಾಲದಲ್ಲಿ ಜಲಪಾತಗಳನ್ನು ನೋಡಲು ಹೋಗುವುದು ಪ್ರವಾಸಿಗರಿಗೆ ಸಂತೋ ಷದ ವಿಷಯ. ಆದರೆ, ಜಮ್ಮು-ಕಾಶ್ಮೀರದಲ್ಲಿ ಜಲಪಾತವೊಂದರಲ್ಲಿ ಭಾನುವಾರ ಸ್ನಾನಕ್ಕಿಳಿದವರ ಮೇಲೆ ಬೃಹತ್ ಬಂಡೆಯೊಂದು ಉರುಳಿದ ಪರಿಣಾಮ ಏಳು ಮಂದಿ ಮೃತಪಟ್ಟು, 30 ಮಂದಿ ಗಾಯಗೊಂಡಿದ್ದಾರೆ.

ರಿಯಾಸಿ ಜಿಲ್ಲೆಯ ಸಿಯಾರ್ ಬಾಬಾ ಜಲಪಾತದಲ್ಲಿ ಮಧ್ಯಾಹ್ನ 3:30ಕ್ಕೆ ಹಲವು ಮಂದಿ  ಸ್ನಾನಕ್ಕಿಳಿದಿದ್ದರು. ಸುಮಾರು 100 ಅಡಿ ಎತ್ತರದ ಜಲಪಾತದ ಮೇಲಿಂದ ಸಡಿಲವಾಗಿದ್ದ ಬಂಡೆಯೊಂದು ಈ ವೇಳೆ ಉರುಳಿ ಸ್ನಾನ ಮಾಡುವವರ ಮೇಲೆ ಬಿದ್ದಿತು. ಉತ್ತರ ಭಾರತದಲ್ಲಿ ಅತಿದೊಡ್ಡ ಜಲಪಾತಗಳಲ್ಲಿ ಒಂದು ಮತ್ತು ಪ್ರವಾಸಿಗರ ಆಕರ್ಷಣೀಯ ತಾಣವಾದ ಈ ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದ ಬಹುತೇಕ ಮಂದಿ ಯುವಕರು.

ಭಾನುವಾರ ರಜೆಯಿದ್ದುದರಿಂದ ಬೃಹತ್ ಸಂಖ್ಯೆಯ ಪ್ರವಾಸಿಗರು ಆಗಮಿಸಿದ್ದರು. ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಹಲವರು ಗಂಭೀರ ಗಾಯಗೊಂಡಿರುವುದರಿಂದ, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ. ಗಾಯಾಳುಗಳನ್ನು ರಿಯಾಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜ್ಯಪಾಲ ಎನ್.ಎನ್. ವೊಹ್ರಾ, ನ್ಯಾಶನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲ ಮತ್ತಿತರ ಪ್ರಮುಖರು ಮೃತರಿಗೆ ಸಂತಾಪ ಸೂಚಿಸಿದ್ದಾರೆ.

click me!