
ನವದೆಹಲಿ: ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ಮತ್ತು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ 2019ರ ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣದ ಸಿಕಂದರಾಬಾದ್ ನಿಂದ ಕಣಕ್ಕಿಳಿಯಲು ಇಚ್ಛಿಸಿರುವೆ ಎಂದಿದ್ದಾರೆ.
‘2009 ರಲ್ಲಿ ಉತ್ತರ ಪ್ರದೇಶ ಮೊರಾದಾಬಾದ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ನಾನು 2014 ರಲ್ಲಿ ರಾಜಸ್ಥಾನದ ಟೋಂಕ್-ಸವಾಯಿ ಮಧೋಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದೆ. ಆದರೆ, ಅಲ್ಲಿ ಪರಾಭವಗೊಂಡಿದ್ದೆ. ಈ ಮೂಲಕ ನಾನು ಸುರಕ್ಷಿತ ಕ್ಷೇತ್ರಕ್ಕೆ ಅಂಟಿಕೊಳ್ಳುವವನಲ್ಲ ಎಂಬುದನ್ನು ನಿರೂಪಿಸಿದ್ದೇನೆ,’ ಎಂದು ಅಜರ್ ಇಲ್ಲಿ ಹೇಳಿದರು.