65 ವರ್ಷದ ರಾಜಕಾರಣಿಗಳ ಸ್ವಯಂ ನಿವೃತ್ತಿಗೆ 5 ಲಕ್ಷ ರು. ಗೌರವಧನ

Published : Jan 06, 2018, 10:32 AM ISTUpdated : Apr 11, 2018, 01:04 PM IST
65 ವರ್ಷದ ರಾಜಕಾರಣಿಗಳ ಸ್ವಯಂ ನಿವೃತ್ತಿಗೆ 5 ಲಕ್ಷ ರು. ಗೌರವಧನ

ಸಾರಾಂಶ

ಯುವಕರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ 65 ವರ್ಷ ಮೇಲ್ಪಟ್ಟ ಯಾವುದೇ ಪಕ್ಷದ ರಾಜಕಾರಣಿಗಳಿಗೆ ನಿವೃತ್ತಿ ಪಡೆದುಕೊಂಡರೆ ‘ಸ್ವಯಂ ನಿವೃತ್ತಿ ಯೋಜನೆ’ ಅಡಿ 5 ಲಕ್ಷ ರು. ಗೌರವ ಧನ ನೀಡುವುದಾಗಿ ನವ ಭಾರತ್ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅನಿಲ್ ಶೆಟ್ಟಿ ಘೋಷಿಸಿದ್ದಾರೆ.

ಬೆಂಗಳೂರು (ಜ.06): ಯುವಕರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ 65 ವರ್ಷ ಮೇಲ್ಪಟ್ಟ ಯಾವುದೇ ಪಕ್ಷದ ರಾಜಕಾರಣಿಗಳಿಗೆ ನಿವೃತ್ತಿ ಪಡೆದುಕೊಂಡರೆ ‘ಸ್ವಯಂ ನಿವೃತ್ತಿ ಯೋಜನೆ’ ಅಡಿ 5 ಲಕ್ಷ ರು. ಗೌರವ ಧನ ನೀಡುವುದಾಗಿ ನವ ಭಾರತ್ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅನಿಲ್ ಶೆಟ್ಟಿ ಘೋಷಿಸಿದ್ದಾರೆ.

 ಈ ಸಂಬಂಧ ಅನಿಲ್ ಶೆಟ್ಟಿ ಅವರು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದಾರೆ. ದೇಶದ ಬಹುಪಾಲು ರಾಜಕಾರಣಿಗಳು 60 ವರ್ಷ ಮೇಲ್ಪಟ್ಟವರಾಗಿದ್ದಾರೆ. ದೇಶದ ಶೇ.65 ಕ್ಕಿಂತಲೂ ಹೆಚ್ಚಿನ ಜನರು 35 ವರ್ಷದೊಳಗಿನವ ರಾಗಿದ್ದಾರೆ. ಯುವಶಕ್ತಿ ಅತ್ಯಮೂಲ್ಯವಾಗಿದೆ.

ದೇಶದ ಪ್ರಜೆಯ ಸರಾಸರಿ ವಯಸ್ಸು 28 ಆಗಿದ್ದು, ಸಂಸದರು ಹಾಗೂ ಶಾಸಕರ ವಯಸ್ಸು 54 ಆಗಿದೆ. ಇದರಿಂದಾಗಿ ದೇಶದ ಮತ್ತು ರಾಜ್ಯದ ಭವಿಷ್ಯದ ಯೋಜನೆಗಳ ಬಗ್ಗೆ ನಿರ್ಧಾರ ಕೇವಲ ಹಿರಿಯ ರಾಜಕಾರಣಿಗಳ ಕೈಯ ಲ್ಲಿದೆ. ಇದು ಯುವಕರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ. ಪ್ರಜಾಪ್ರಭುತ್ವದಲ್ಲಿ ಅಸಮಾಧಾನ ತೋರುತ್ತಿದೆ.

25 ವರ್ಷದ ಯುವಕರು ಮಾನಸಿಕವಾಗಿ, ಶಾರೀರಕವಾಗಿ ಮತ್ತು ಬೌದ್ಧಿಕವಾಗಿ ಶಾಸಕರು ಮತ್ತು ಸಂಸದರಾಗಲು ಯೋಗ್ಯರೆಂದು ಭಾವಿಸಿ ಸಂವಿಧಾನವು ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕಲ್ಪಿಸಿದೆ. ಆದರೆ, ಹಿರಿಯ ರಾಜಕಾರಣಿಗಳು ಅಧಿಕಾರದ ಮೋಹದಿಂದ ಯುವಕರನ್ನು ವಂಚಿಸುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೊಂದು ಗಂಭೀರ ಸಮಸ್ಯೆ, ದೇಶದ ಅಭಿವೃದ್ಧಿಗೆ ಮಾರಕವಾಗಿದೆ.

ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕಾದರೆ ಯುವಕರಿಗೆ ಅವಕಾಶ ಕಲ್ಪಿ ಸುವಂತೆ ಮನವಿ ಮಾಡುತ್ತಾ ಈ ಯೋಜನೆ ಯನ್ನು ಘೋಷಿಸುತ್ತಿದ್ದೇನೆ. ಕೂಡ ಲೇ ತಮ್ಮ ಪಕ್ಷದ ನಾಯಕರಿಗೆ ತಿಳಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

KSRTC ಬಸ್‌ನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸುವವರಿಗೆ ಬಿಗ್ ಶಾಕ್, 8 ಲಕ್ಷಕ್ಕೂ ಅಧಿಕ ದಂಡ ವಸೂಲಿ!
ಮತ್ತೆ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ಚಿಂತನೆ, ಪ್ರಯಾಣಿಕರ ಆಕ್ರೋಶ, ಹೋರಾಟದ ಎಚ್ಚರಿಕೆ ಕೊಟ್ಟ ಸಂಸದ ಸೂರ್ಯ