
ಬೆಂಗಳೂರು(ಸೆ.18): ಕೆರೆ ತುಂಬಿಸುವುದು ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆ. ಇದನ್ನ ಯಶಸ್ವಿಗೊಳಿಸುವ ಜವಾಬ್ದಾರಿ ಜಲಸಚಿವರದ್ದಾಗಿದೆ. ಆದರೆ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲರು ತಮ್ಮ ತವರಲ್ಲೇ ಕೆರೆ ತುಂಬಿಸುವ ಬದಲು ಕೆರೆ ಮುಚ್ಚಿಸುವ ಕೆಲಸ ಮಾಡಿದ್ದಾರೆ.
ಬಿಜಾಪುರದ ಬಸವನಬಾಗೇವಾಡಿ ತಾಲೂಕಿನ ಕೂಡಗಿ ಗ್ರಾಮದಲ್ಲಿ 60 ವರ್ಷಗಳ ಹಳೆಯ ಕೆರೆಯನ್ನು ಉಷ್ಣ ವಿದ್ಯುತ್ ಸ್ಥಾವರಕ್ಕೆ ರೈಲ್ವೆ ಲೈನ್ ನಿರ್ಮಾಣದ ನೆಪದಲ್ಲಿ ಮುಚ್ಚುತ್ತಿದ್ದಾರೆ. ಬರೋಬ್ಬರಿ 28 ಎಕರೆಯಷ್ಟು ಬೃಹತ್ತಾಗಿದ್ದ ದೊಡ್ಡ ಕೆರೆ, ನೂರಾರು ಎಕರೆ ಜಮೀನಿಗೆ ನೀರುಣಿಸುತ್ತಿತ್ತು. ಜೊತೆಗೆ ಸಾವಿರಾರು ದನಕರುಗಳಿಗೆ ಜೀವನಾಡಿಯಾಗಿತ್ತು. ಇದನ್ನ ಮುಚ್ಚಿದ್ದರಿಂದ ರೈತರು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ.
ಕೆರೆ ತುಂಬುವ ಹೆಸರಲ್ಲಿ ಕೋಟಿ ಕೋಟಿ ಗುಳುಂ: ಸುವರ್ಣನ್ಯೂಸ್ನ ರಿಯಾಲಿಟಿ ಚೆಕ್'ನಲ್ಲಿ ಬಯಲು
ರಾಜ್ಯ ಸರ್ಕಾರ ರಾಜ್ಯಾದ್ಯಾಂತ 4 ಸಾವಿರಕ್ಕೂ ಅಧಿಕ ಕೆರೆಗಳನ್ನು ತುಂಬಿಸಿದ್ದೇವೆ ಅಂತ ಕೊಚ್ಚಿಕೊಳ್ಳುತ್ತಿದೆ. ದುರಂತ ಅಂದ್ರೆ ಜಲಸಚಿವರ ಜಿಲ್ಲೆಯಲ್ಲೇ ಕೆರೆ ತುಂಬೋ ಯೋಜನೆಯಲ್ಲಿ ಭಾರೀ ಗೋಲ್ಮಾಲ್ ನಡೆದಿದೆ. ಇದು ಸುವರ್ಣ ನ್ಯೂಸ್ ನಡೆಸಿದ ರಿಯಾಲಿಟಿ ಚೆಕ್ನಲ್ಲಿ ಬಯಲಾಗಿದೆ. ವಿಜಯಪುರದಲ್ಲಿ ಒಟ್ಟು 77 ಕೆರೆಗಳಿಗೆ ನೀರು ತುಂಬಿಸಲಾಗಿದೆ ಅಂತ ದಾಖಲೆ ಹೇಳುತ್ತೆ. ಆದ್ರೆ ಪ್ರಾಮಾಣಿಕವಾಗಿ 7 ಕೆರೆಗೂ ನೀರು ತುಂಬಿಸಿಲ್ಲ .
ಬೇಗಂ ತಾಲಾಬ್, ಬೂತನಾಳ ಕೆರೆ ಬಿಟ್ರೆ ಉಳಿದೆಲ್ಲವುಗಳಿಗೆ ಹನಿ ನೀರು ಹರಿಸಿಲ್ಲ. ಇದಕ್ಕಾಗಿ ಬರೊಬ್ಬರಿ 562 ಕೋಟಿ 27 ಲಕ್ಷ ರೂಪಾಯಿ ವ್ಯಯಿಸಿದ್ದಾರಂತೆ. ...ಸಚಿವರ ತವರಲ್ಲೇ ಇಷ್ಟೊಂದು ಹಗರಣ ನಡೆದಿದೆ ಎಂದಾದ್ರೆ, ಇಡೀ ರಾಜ್ಯದಲ್ಲಿ ನಡೆದಿರೋ ಹಗರಣದ ಪ್ರಮಾಣ ಎಷ್ಟಿರಬಹುದು ಅನ್ನೋದು ತನಿಖೆಯಿಂದ ಬಯಲಾಗಬೇಕು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.