59 ಮಂದಿ ಉಗ್ರ ಸಂಘಟನೆ ಸೇರ್ಪಡೆ...!

By Suvarna Web DeskFirst Published Jan 3, 2017, 2:26 PM IST
Highlights

ಕಾಣೆಯಾಗಿರುವ ಯುವಕರು ಹಾಗೂ ಉಗ್ರರು ಹಿಂಸೆ ತ್ಯಜಿಸಿ ಭಾರತದ ಐಕ್ಯತೆ ಹಾಗೂ ಸಂವಿಧಾನವನ್ನು ಒಪ್ಪಿಕೊಳ್ಳುವಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದ ಪುನರ್ವಸತಿ ಯೋಜನೆ ಸಹಕಾರಿಯಾಗಿದೆ.

- ಮೆಹಬೂಬಾ ಮುಫ್ತಿ

ಜಮ್ಮು(ಜ.03): ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಉಗ್ರ ಬುರ್ಹಾನ್ ವಾನಿಯನ್ನು ಸೇನೆಯು ಹತ್ಯೆಗೈದ ಬಳಿಕ ಕಣಿವೆ ರಾಜ್ಯದ 59 ಮಂದಿ ಯುವಕರು ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದಾರೆ ಎಂದು ಜಮ್ಮು-ಕಾಶ್ಮೀರ ಸರ್ಕಾರ ತಿಳಿಸಿದೆ.

ವಿಧಾನಸಭೆಯಲ್ಲಿ ಶಾಸಕ ಮುಬಾರಕ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಿಎಂ ಮೆಹಬೂಬಾ ಮುಫ್ತಿ, ‘‘ಕಳೆದ ವರ್ಷ ಜು. 8ರಂದು ಬುರ್ಹಾನ್‌'ನನ್ನು ಎನ್‌ಕೌಂಟರ್ ಮಾಡಿದ ನಂತರ 59 ಯುವಕರು ಉಗ್ರ ಸಂಘಟನೆಗಳಿಗೆ ಸೇರಿದ್ದಾರೆ ಎಂದು ಸಿಐಡಿ ಪ್ರಧಾನ ಕಚೇರಿ ಮಾಹಿತಿ ನೀಡಿದೆ,’’ ಎಂದು ಹೇಳಿದ್ದಾರೆ.

ಕಾಣೆಯಾಗಿರುವ ಯುವಕರು ಹಾಗೂ ಉಗ್ರರು ಹಿಂಸೆ ತ್ಯಜಿಸಿ ಭಾರತದ ಐಕ್ಯತೆ ಹಾಗೂ ಸಂವಿಧಾನವನ್ನು ಒಪ್ಪಿಕೊಳ್ಳುವಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದ ಪುನರ್ವಸತಿ ಯೋಜನೆ ಸಹಕಾರಿಯಾಗಿದೆ ಎಂದೂ ಹೇಳಿದ್ದಾರೆ.

ರಾಜ್ಯ ಸರ್ಕಾರದ ಹೊಸ ಯೋಜನೆಯ ಪ್ರಕಾರ ಶರಣಾದ ಉಗ್ರಗಾಮಿಯ ಖಾತೆಗೆ 1.50 ಲಕ್ಷ ರೂಪಾಯಿ ಪಿಕ್ಸೆಡ್ ಡೆಪಾಸಿಡ್(ಎಫ್'ಡಿ) ಮಾಡಲಾಗುತ್ತದೆ. ಈ ಯೋಜನೆಯಡಿ 2004ರಿಂದ ಇಲ್ಲಿಯವರೆಗೆ 437 ಪ್ರಕರಣಗಳಲ್ಲಿ ಭಾಗಿಯಾದ ಉಗ್ರಗಾಮಿಗಳು ಶರಣಾಗಿದ್ದಾರೆ ಎಂದು ಮೆಹಬೂಬ ತಿಳಿಸಿದ್ದಾರೆ.

click me!