
ಸಿಂಧನೂರು(ಸೆ.30): ಟಂಟಂ ಆಟೋ ಮತ್ತು ಐಷರ್ ಮಿನಿ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದ ಹೊರವಲಯದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಸಿಂಧನೂರು ಸಮೀಪದ ಬೂತಲದಿನ್ನಿ ಕ್ಯಾಂಪಿನ ನಿವಾಸಿ ತಾಯಿ ಖಾಜಮ್ಮ ಸಬ್ಜಲಿಸಾಬ (65), ಇವರ ಸೊಸೆ ಶಾಮೀದ್‌ಸಾಬ ಸಬ್ಜಲಿಸಾಬ (35), ಪುತ್ರ ಸಬ್ಜಲಿಸಾಬ ರಂಜಾನಸಾಬ (40), ಮೊಮ್ಮಗಳು ಲಾಲಬಿ ಸಬ್ಜಲಿಸಾಬ (12), ಅದೇ ಗ್ರಾಮದ ನಿವಾಸಿ ಈರಯ್ಯಸ್ವಾಮಿ ಸಣ್ಣಯ್ಯಸ್ವಾಮಿ (45) ಮೃತರು.
ಇವರೆಲ್ಲ ಸಿಂಧನೂರಿನಲ್ಲಿ ಮೊಹರಂ ಹಬ್ಬದ ಸಂತೆ ಮುಗಿಸಿ, ಮೊಹರಂ ಹಬ್ಬಕ್ಕೆಂದು ಸಂತೆ ಮಾಡಿಕೊಂಡು ಶನಿವಾರ ರಾತ್ರಿ ಖತಲ್‌ರಾತ್ರಿ ಆಚರಿಸಲು ತಯಾರಿ ನಡೆಸಲು ಟಂಟಂ ಆಟೋದಲ್ಲಿ ತಮ್ಮ ಕ್ಯಾಂಪಿಗೆ ತೆರಳುತ್ತಿದ್ದಾಗ ಮಸ್ಕಿ ಕಡೆಯಿಂದ ವೇಗವಾಗಿ ಬರುತ್ತಿದ್ದ ಐಷರ್ ಮಿನಿ ಲಾರಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಟಂಟಂ ಆಟೋದಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಐಷರ್ ಮಿನಿ ಲಾರಿಯ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಆತನನ್ನು ಸಿಂಧನೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
--
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.