ಮೋದಿ ವಿರುದ್ಧ ಸಿದ್ಧವಾಗಿದೆ ಮೂವರು ಸ್ತ್ರೀ ಶಕ್ತಿಗಳ ಪಡೆ

By Web DeskFirst Published Feb 2, 2019, 1:07 PM IST
Highlights

ದೇಶದಲ್ಲಿ ಇನ್ನೇನು ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೋರಾಟಕ್ಕೆ ಮೂವರು ಸ್ತ್ರೀಶಕ್ತಿಗಳ ಪಡೆಯೊಂದು ಹೋರಾಟಕ್ಕೆ ಸಜ್ಜಾಗುತ್ತಿದೆ. 

ನವದೆಹಲಿ : ಸಮಾಜದ ಬೇರೆ ಬೇರೆ ಸ್ಥರಗಳಿಂದ ಬಂದ ಮೂವರು ಮಹಿಳಾ ರಾಜಕಾರಣಗಳು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 2ನೇ ಬಾರಿ ಆಯ್ಕೆಯಾಗಲು ಭಾರೀ ಸವಾಲು ಒಡ್ಡುತ್ತಿದ್ದಾರೆ. 

ಪ್ರಿಯಾಂಕ ಗಾಂಧಿ ವಾದ್ರಾ ನೆಹರು ಕುಟುಂಬದ ಕುಡಿ. ದೇಶ ಸ್ವಾತಂತ್ರ್ಯವಾದ ಬಳಿಕ ದೇಶವನ್ನು ಹೆಚ್ಚು ಸಮಯ ಆಳಿದ ಪಕ್ಷದಿಂದ ಬಂದವರು. ಕಳೆದ ಜನವರಿ ತಿಂಗಳಲ್ಲಿ ಅಧಿಕೃತವಾಗಿ ರಾಜಕೀಯ ರಣಾಂಗಣಕ್ಕೆ ಇಳಿದು ಕದನಕ್ಕೆ ಸಿದ್ಧವಾಗಿದ್ದಾರೆ. 

ಇನ್ನಿಬ್ಬರು ಹಿರಿಯ ನಾಯಕಿಯರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮತ್ತೋರ್ವರು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ. ಈ ಮೂವರೂ ಕೂಡ ಪ್ರಧಾನಿ ಮೋದಿ  ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ ಗೆ ಬೃಹತ್ ಪೈಪೋಟಿ ನೀಡುವ ಬಲವಾದ ಗುಂಪಾಗಿದೆ. 

ಆದರೆ ಇದುವರೆಗೂ ಕೂಡ ಈ ಮೂವರು ನಾಯಕಿಯರ ನಡುವೆ ಒಗ್ಗೂಡಿ ಹೋರಾಡುವ ಬಗ್ಗೆ ಯಾವುದೇ ರೀತಿಯ ನಿರ್ಧಾರಗಳಾಗಿಲ್ಲ. 

NDA ಒಕ್ಕೂಟಕ್ಕಿಂತ ವಿಪಕ್ಷಗಳ ಒಕ್ಕೂಟದಲ್ಲಿ ಅತ್ಯಂತ ಸಾಮರ್ಥ್ಯವುಳ್ಳ ಮಹಿಳೆಯರಿದ್ದು, ಹೆಚ್ಚಿನ ಮತಗಳನ್ನು ತಮ್ಮತ್ತ ಸೆಳೆದುಕೊಳ್ಳುವ ಸಾಮರ್ಥ್ಯವುಳ್ಳವರಾಗಿದ್ದಾರೆ ಎಂದು ಈ ಬಗ್ಗೆ ಇತ್ತೀಚೆಗಷ್ಟೇ ಬಿಜೆಪಿ ತ್ಯಜಿಸಿದ್ದ ಯಶವಂತ್ ಸಿನ್ಹಾ ಹೇಳಿದ್ದಾರೆ. 

ಇತ್ತೀಚೆಗಷ್ಟೇ ಪಂಚರಾಜ್ಯಗಳ್ಲಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಸೋಲನ್ನು ಅನುಭವಿಸಿದ್ದು,  ಮುಂದಿನ ಚುನಾವಣೆ ಬಗ್ಗೆ ಇನ್ನಷ್ಟು ಭಯದ ವಾತಾವರಣ ಬಿಜೆಪಿಯಲ್ಲಿದೆ ಎಂದು ಹೇಳಿದ್ದಾರೆ. 

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ  ವೇಳೆ ಈ ಮಹಿಳಾ ಒಕ್ಕೂಟ ಯಾವ ರೀತಿಯಾಗಿ ತಮ್ಮ ಪಾತ್ರವಹಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. 

click me!