ಸಮ್ಮಿಶ್ರ ಸರ್ಕಾರದ ಮೂವರು ಶಾಸಕರು ಬಿಜೆಪಿ ಸಂಪರ್ಕದಲ್ಲಿ?

By Web DeskFirst Published Sep 22, 2018, 10:57 AM IST
Highlights

ಸಮ್ಮಿಶ್ರ ಸರ್ಕಾರದ  ಮೂರು ಶಾಸಕರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಬಾಂಬ್ ಸಿಡಿಸಿದ್ದಾರೆ. 

ಶಿವಮೊಗ್ಗ: ಜೆಡಿಎಸ್- ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆಡಳಿತ ಪಕ್ಷ ಆರೋಪಿಸುತ್ತಿರುವಾಗಲೇ, ಸಮ್ಮಿಶ್ರ ಸರ್ಕಾರದ  ಮೂರು ಶಾಸಕರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ಶಾಸಕರು ಅವರಾಗಿಯೇ ನನ್ನ ಬಳಿ ಬಂದಿದ್ದಾರೆಯೇ ಹೊರತು ನಾನು ಯಾರನ್ನೂ ಸಂಪರ್ಕಿಸಿದ್ದಲ್ಲ. ಇದಕ್ಕೆ ನಾನೇನು ಮಾಡಬೇಕು ಎಂದು ಪ್ರಶ್ನಿಸಿದರು. ಯಾರು ತಮ್ಮ ಜೊತೆ ಬಂದಿರುವ ಶಾಸಕರು ಎಂಬ ಪ್ರಶ್ನೆಗೆ, ಈಗ ಅದನ್ನು ಹೇಳಲು ಸಾಧ್ಯವಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಶಾಸಕರು ಎಂದಷ್ಟೇ ಹೆೀಳಬಲ್ಲೆ. ಅವರ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. 

ಹೀಗಾಗಿ ನಮ್ಮ ಮೇಲೆ ಆರೋಪಮಾಡುವ ಪ್ರಯತ್ನ ಮಾಡುವ ಹತಾಶ ಸ್ಥಿತಿ ತಲುಪಿದ್ದಾರೆ ಎಂದು ಹೇಳಿದರು. ದಂಗೆ ಪದಬಳಕೆ ಮಾಡುವುದರ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಸಂವಿಧಾನ ವಿರೋಧಿ ನೀತಿ ತಾಳಿದ್ದಾರೆ. ಗೂಂಡಾ ರೀತಿ ವರ್ತನೆ ತೋರಿದ್ದಾರೆ.  ಮುಖ್ಯಮಂತ್ರಿ ಗಳಾದವರು ವಿರೋಧ ಪಕ್ಷವನ್ನು ರಕ್ಷಣೆ ಮಾಡಬೇಕು. ಅದನ್ನು ಬಿಟ್ಟು ದಂಗೆ ಏಳಿ ಎಂದು ಕರೆ ಕೊಟ್ಟಿದ್ದಾರೆ. ಇದನ್ನು ನೋಡಿದರೆ ರಾಜ್ಯದಲ್ಲಿ ಗೂಂಡಾ ಆಡಳಿತ ಇರುವುದು ಸ್ಪಷ್ಟವಾಗುತ್ತದೆ ಎಂದರು.

click me!