ಪ್ರವಾಹಕ್ಕೆ ಸಿಲುಕಿ ಕಾಜಿರಂಗ ಉದ್ಯಾನವನದ 225 ಪ್ರಾಣಿಗಳು ಸಾವು?

By Web DeskFirst Published Sep 7, 2018, 10:03 AM IST
Highlights

ಸದ್ಯ ಅಸ್ಸಾಂನಲ್ಲಿ ಇತ್ತೀಚೆಗೆ ಪ್ರವಾಹ ಉಂಟಾಗಿ ಅಲ್ಲಿನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ 225 ಪ್ರಾಣಿಗಳು ಮೃತಪಟ್ಟಿವೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಹಲವರು ಈ ಸಂದೇಶಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಸೆ. 07): ಈ ಬಾರಿ ಪ್ರವಾಹಕ್ಕೆ ಸಿಲುಕಿ ಕೇರಳ, ಕರ್ನಾಟಕದ ಕೊಡಗು ಅಕ್ಷರಶಹಃ ತತ್ತರಿಸಿದ್ದು, ನೂರಾರು ಜನರು ಬಲಿಯಾಗಿದ್ದಾರೆ, ಸಾವಿರಾರು ಜನರು ಬೀದಿಗೆ ಬಂದಿದ್ದಾರೆ.

ಆದರೆ ಈ ನಡುವಲ್ಲೇ ಮಳೆಯಾಧಾರಿತ ಸುಳ್ಳು ಸುದ್ದಿಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸದ್ಯ ಅಸ್ಸಾಂನಲ್ಲಿ ಇತ್ತೀಚೆಗೆ ಪ್ರವಾಹ ಉಂಟಾಗಿ ಅಲ್ಲಿನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ 225 ಪ್ರಾಣಿಗಳು ಮೃತಪಟ್ಟಿವೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹಲವರು ಈ ಸಂದೇಶಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಇನ್ನೂ ಹಲವರು ಈ ಸುದ್ದಿಯನ್ನು ಶೇರ್ ಮಾಡಿದ್ದಾರೆ. ಆದರೆ ನಿಜಕ್ಕೂ ಇತ್ತೀಚೆಗೆ ಅಸ್ಸಾಂ ಪ್ರವಾಹಕ್ಕೆ ಸಿಲುಕಿ 225 ಪ್ರಾಣಿಗಳು ಮೃತಪಟ್ಟಿದ್ದವೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ಪತ್ತೆಯಾಗಿದೆ. ಈ ಬಗ್ಗೆ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕ ಹೊರಟಾಗ ವಾಸ್ತವವಾಗಿ ಈ ಬಾರಿಯ ಅತಿಯಾದ ಮಳೆಯಿಂದಾಗಿ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ 225 ಕ್ಕೂ ಹೆಚ್ಚು ಪ್ರಾಣಿಗಳು ಮೃತಪಟ್ಟಿಲ್ಲ.

ಬದಲಾಗಿ 2017 ರಲ್ಲಿ ಉಂಟಾದ ಪ್ರವಾಹಕ್ಕೆ ಸಿಲುಕಿ ರಾಷ್ಟ್ರೀಯ ಉದ್ಯಾನವನದ 225 ಪ್ರಾಣಿಗಳು ಮೃತಪಟ್ಟಿದ್ದವು ಎಂಬ ಅಂಶ ಬಯಲಾಗಿದೆ. 2017 ಅಕ್ಟೋಬರ್‌ನಲ್ಲಿ ಸುರಿದ ಬಾರೀ ಮಳೆಗೆ ಕಾಜೀರಂಗದಲ್ಲಿದ್ದ ನೂರಾರು ಪ್ರಾಣಿಗಳು ಮೃತಪಟ್ಟಿದ್ದವು. ಅದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅದೇ ಫೋಟೋಗಳನ್ನು ಬಳಸಿಕೊಂಡು ಈಗ ಕಾಜಿರಂಗದಲ್ಲಿದ್ದ 225 ಪ್ರಾಣಿಗಳು ಮೃತಪಟ್ಟಿವೆ ಎಂದು ಸುಳ್ಳುಸುದ್ದಿ ಹಬ್ಬಿಸಲಾಗಿದೆ. 

-ವೈರಲ್ ಚೆಕ್ 

click me!