2017-18ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟ

Published : Jun 01, 2018, 01:48 PM IST
2017-18ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟ

ಸಾರಾಂಶ

ಎಂಜಿನಿಯರಿಂಗ್, ಪಶು ವೈದ್ಯಕೀಯ ಹಾಗೂ ಕೃಷಿ ವಿಜ್ಞಾನ ವೃತ್ತಿಪರ ಕೋರ್ಸ್’ಗಳಿಗೆ ನಡೆದ 2017-18ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟಗೊಂಡಿದ್ದು, ಇಂಜಿನಿಯರಿಂಗ್ ಹಾಗೂ ಕೃಷಿ ವಿಜ್ಞಾನ ವಿಭಾಗದಲ್ಲಿ ವಿಜಯಪುರದ ಎಕ್ಸಲೆಂಟ್ ಪಿಯು ಸೈನ್ಸ್ ಕಾಲೇಜು ವಿದ್ಯಾರ್ಥಿ ಶ್ರೀಧರ್ ದೊಡ್ಡಮನಿ ಮೊದಲ ರ‍್ಯಾಂಕ್ ಪಡೆದಿದ್ದರೆ, ಪಶು ವೈದ್ಯಕೀಯ ವಿಭಾಗದಲ್ಲಿ ಮಂಗಳೂರಿನ ಎಕ್ಸ್’ಪರ್ಟ್ ಪಿಯು ಕಾಲೇಜು ವಿದ್ಯಾರ್ಥಿ ವಿನೀತ್ ಮೇಗೂರ್ ಹಾಗೂ ಬಿ ಫಾರ್ಮಾ ವಿಭಾಗದಲ್ಲಿ ಬೆಂಗಳೂರಿನ ಕುಂದಲಹಳ್ಳಿ ನಾರಾಯಣ ಇ ಟೆಕ್ನೋ ಸ್ಕೂಲ್’ನ ತುಹಿನ್ ಗಿರಿನಾಥ್ ಮೊದಲ ರ‍್ಯಾಂಕ್ ಪಡೆದಿದ್ದಾರೆ.

ಬೆಂಗಳೂರು[ಜೂ.01]: ಎಂಜಿನಿಯರಿಂಗ್, ಪಶು ವೈದ್ಯಕೀಯ ಹಾಗೂ ಕೃಷಿ ವಿಜ್ಞಾನ ವೃತ್ತಿಪರ ಕೋರ್ಸ್’ಗಳಿಗೆ ನಡೆದ 2017-18ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟಗೊಂಡಿದ್ದು, ಇಂಜಿನಿಯರಿಂಗ್ ಹಾಗೂ ಕೃಷಿ ವಿಜ್ಞಾನ ವಿಭಾಗದಲ್ಲಿ ವಿಜಯಪುರದ ಎಕ್ಸಲೆಂಟ್ ಪಿಯು ಸೈನ್ಸ್ ಕಾಲೇಜು ವಿದ್ಯಾರ್ಥಿ ಶ್ರೀಧರ್ ದೊಡ್ಡಮನಿ ಮೊದಲ ರ‍್ಯಾಂಕ್ ಪಡೆದಿದ್ದರೆ, ಪಶು ವೈದ್ಯಕೀಯ ವಿಭಾಗದಲ್ಲಿ ಮಂಗಳೂರಿನ ಎಕ್ಸ್’ಪರ್ಟ್ ಪಿಯು ಕಾಲೇಜು ವಿದ್ಯಾರ್ಥಿ ವಿನೀತ್ ಮೇಗೂರ್ ಹಾಗೂ ಬಿ ಫಾರ್ಮಾ ವಿಭಾಗದಲ್ಲಿ ಬೆಂಗಳೂರಿನ ಕುಂದಲಹಳ್ಳಿ ನಾರಾಯಣ ಇ ಟೆಕ್ನೋ ಸ್ಕೂಲ್’ನ ತುಹಿನ್ ಗಿರಿನಾಥ್ ಮೊದಲ ರ‍್ಯಾಂಕ್ ಪಡೆದಿದ್ದಾರೆ.
ಏಪ್ರಿಲ್ 19 ಹಾಗೂ 20ರಂದು ನಡೆದ ಪರೀಕ್ಷೆಯಲ್ಲಿ ರಾಜ್ಯದ 1,98,699 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ ಕೃಷಿ ಕೋಟಾದ ಅಡಿ 83,302 ವಿದ್ಯಾರ್ಥಿ ಸಿಇಟಿ ಪರೀಕ್ಷೆ ತೆಗೆದುಕೊಂಡಿದ್ದರು.
ಸಿಇಟಿ ಫಲಿತಾಂಶ ತಿಳಿಯಲು kea.kar.nic.in, cet.kar.nic.in ಹಾಗೂ karresults.nic.in ವೆಬ್’ಸೈಟ್ಸ್’ಗೆ ಭೇಟಿ ನೀಡಬಹುದು.

ಇಂಜಿನಿಯರಿಂಗ್ ವಿಭಾಗದ ಟಾಪ್ 5 ರ‍್ಯಾಂಕ್ ಹೋಲ್ಡರ್’ಗಳ ವಿವರ
1ನೇ ರ‍್ಯಾಂಕ್ - ಶ್ರೀಧರ್ ದೊಡ್ಡಮನಿ, ಎಕ್ಸಲೆಂಟ್ ಪಿಯು ಸೈನ್ಸ್ ಕಾಲೇಜು, ವಿಜಯಪುರ
2ನೇ ರ‍್ಯಾಂಕ್ - ನಾರಾಯಣ ಪೈ, ಶಾರದಾ ಇಂಡಿಪೆಂಡೆಂಟ್ ಪಿಯು ಕಾಲೇಜು, ದಕ್ಷಿಣ ಕನ್ನಡ
3ನೇ ರ‍್ಯಾಂಕ್ - ಡೇಬರ್ಶೋ ಸನ್ಯಾಸಿ, ಜಿಂದಾಲ್ ವಿದ್ಯಾ ಮಂದಿರ್, ಬಳ್ಳಾರಿ
4ನೇ ರ‍್ಯಾಂಕ್ - ಗಿರಿನಾಥ್, ನಾರಾಯಣ ಇ-ಟೆಕ್ನೋ ಸ್ಕೂಲ್, ಕುಂದಲಹಳ್ಳಿ, ಬೆಂಗಳೂರು
5ನೇ ರ‍್ಯಾಂಕ್ - ಅನಿತಾ ಜೇಮ್ಸ್, ನ್ಯಾಷನಲ್ ಪಬ್ಲಿಕ್ ಸ್ಕೂಲ್, ಇಂದಿರಾನಗರ, ಬೆಂಗಳೂರು

ಬಿಎಸ್ಸಿ ಅಗ್ರಿ ವಿಭಾಗದಲ್ಲಿ ಟಾಪ್ 5 ರ‍್ಯಾಂಕ್ ಹೋಲ್ಡರ್ ಗಳು ವಿವರ
1ನೇ ರ‍್ಯಾಂಕ್ - ಶ್ರೀಧರ್ ದೊಡ್ಡಮನಿ, ಎಕ್ಸಲೆಂಟ್ ಪಿಯು ಸೈನ್ಸ್ ಕಾಲೇಜು, ವಿಜಯಪುರ
2ನೇ ರ‍್ಯಾಂಕ್ -ಸಾಯಿಕುಮಾರ್ ಆರ್ ಸಾಧುನವರ್, ಚೇತನ ಇಂಡಿಪೆಂಡೆಂಟ್ ಪಿಯು ಕಾಲೇಜು, ಹುಬ್ಬಳ್ಳಿ
3ನೇ ರ‍್ಯಾಂಕ್ - ಮಹಿಮಾ ಕೃಷ್ಣ, ವಿವಿಎಸ್ ಸರ್ದಾರ್ ಪಟೇೇಲ್ ಪಿಯು ಕಾಲೇಜು, ಬೆಂಗಳೂರು
4ನೇ ರ‍್ಯಾಂಕ್ - ಎಸ್.ಆರ್.ಅಪರೂಪ, ಸಂಕಲ್ಪ ಪಿಯು ಕಾಲೇಜು, ಬಳ್ಳಾರಿ
5ನೇ ರ‍್ಯಾಂಕ್ - ಶ್ರೇಯಸ್ ಎಸ್, ಪ್ರೆಸಿಡೆನ್ಸಿ ಪಿಯು ಕಾಲೇಜು, ತುಮಕೂರು

ಬಿಎಸ್ಸಿ ಪಶು ವೈದ್ಯಕೀಯ ವಿಭಾಗದಲ್ಲಿ ಟಾಪ್ 5 ರ‍್ಯಾಂಕ್ ಹೋಲ್ಟರ್ ಗಳ ವಿವರ
1ನೇ ರ‍್ಯಾಂಕ್ - ವಿನೀತ್ ಮೇಗೂರ್, ಎಕ್ಸ್’ಪರ್ಟ್ ಪಿಯು ಕಾಲೇಜು, ಮಂಗಳೂರು
2ನೇ ರ‍್ಯಾಂಕ್ - ಎಸ್.ಆರ್.ಅಪರೂಪ, ಸಂಕಲ್ಪ ಪಿಯು ಕಾಲೇಜು, ಬೆಂಗಳೂರು
3ನೇ ರ‍್ಯಾಂಕ್ - ಆದಿತ್ಯಾ ಚಿದಾನಂದ ಈಶ್ವರ, ಶ್ರೀ ಕುಮಾರನ್ ಚಿಲ್ಡ್ರನ್ಸ್ ಹೋಮ್, ಬೆಂಗಳೂರು
4ನೇ ರ‍್ಯಾಂಕ್ - ವೈಷ್ಣವಿ ಪಿ.ಜೆ., ಎಕ್ಸ್ ಪರ್ಟ್ ಪಿಯು ಕಾಲೇಜು, ವಲಚಿಲ್, ಬೆಂಗಳೂರು
5ನೇ ರ‍್ಯಾಂಕ್ - ಶ್ರೇಯಸ್.ಎಸ್., ಪ್ರೆಸಿಡೆನ್ಸಿ ಪಿಯು ಕಾಲೇಜು, ತುಮಕೂರು

ಬಿ ಫಾರ್ಮಾ-ಡಿ ವಿಭಾಗದಲ್ಲಿ ಟಾಪ್ 5 ರ‍್ಯಾಂಕ್ ಹೋಲ್ಟರ್ ಗಳ ವಿವರ
1ನೇ ರ‍್ಯಾಂಕ್ - ತುಹಿನ್ ಗಿರಿನಾಥ್, ನಾರಾಯಣ ಇ ಟೆಕ್ನೋ ಸ್ಕೂಲ್, ಕುಂದಲಹಳ್ಳಿ, ಬೆಂಗಳೂರು
2ನೇ ರ‍್ಯಾಂಕ್ - ಅನಿತಾ ಜೇಮ್ಸ್, ನ್ಯಾಷನಲ್ ಪಬ್ಲಿಕ್ ಸ್ಕೂಲ್, ಬೆಂಗಳೂರು
3ನೇ ರ‍್ಯಾಂಕ್ - ಎಂ.ಯೋಗೇಶ್ ಮಾಧವ ರೆಡ್ಡಿ, ನಾರಾಯಣ ಇ-ಟೆಕ್ನೋ ಸ್ಕೂಲ್, ಬೆಂಗಳೂರು
4ನೇ ರ‍್ಯಾಂಕ್ - ಡೇಬರ್ಶೋ ಸನ್ಯಾಸಿ, ಜಿಂದಾಲ್ ವಿದ್ಯಾ ಮಂದಿರ್, ಬಳ್ಳಾರಿ
5ನೇ ರ‍್ಯಾಂಕ್ - ನಾರಾಯಣ ಪೈ, ಶಾರದಾ ಪಿಯು ಕಾಲೇಜು, ದಕ್ಷಿಣ ಕನ್ನಡ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಣ್ಣಾ, ಇನ್ನು ಎಷ್ಟೊತ್ತು ಎಂದ ಗ್ರಾಹಕನಿಗೆ ಇದು ಪ್ಲೇನ್ ಅಲ್ಲ ಅಂದ ಬೆಂಗ್ಳೂರು ಕ್ಯಾಬ್ ಡ್ರೈವರ್!
ಸೊಗಸಾದ ಬಜೆಟ್‌ ಫ್ರೆಂಡ್ಲಿ ಸ್ಮಾರ್ಟ್‌ಫೋನು ಬೇಕಾ? ಇಲ್ಲಿದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ17 5ಜಿ!