ಜಯಲಲಿತಾ ಬ್ಯಾಂಕ್ ಖಾತೆ ಜೀವಂತ : ವಹಿವಾಟು ಮಾಡ್ತಿರೋದು ಯಾರು..?

By Web DeskFirst Published Jan 27, 2019, 5:23 PM IST
Highlights

ತಮಿಳುನಾಡು ಮಾಜಿ ಸಿಎಂ ಜಯಲಲಿತಾ ನಿಧನರಾದರೂ ಕೂಡ ಅವರ ಬ್ಯಾಂಕ್ ಖಾತೆ ಮಾತ್ರ ಇನ್ನೂ ಜೀವಂತವಾಗಿದೆ. ಈ ಖಾತೆಯಿಂದ ಹಣಕಾಸಿನ ವ್ಯವಹಾರ ನಿರಂತರವಾಗಿ ನಡೆಯುತ್ತಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಚೆನ್ನೈ  : ತಮಿಳುನಾಡು ಮಾಜಿ ಸಿಎಂ ಜಯಲಲಿತಾ ನಿಧನರಾಗಿದ್ದರೂ  ಅವರ ಬ್ಯಾಂಕ್ ಖಾತೆ ಇನ್ನೂ ಜೀವಂತವಾಗಿಯೇ ಇದೆ. ತೆರಿಗೆಯನ್ನು ಕಟ್ಟದ ಹೆಚ್ಚಿನ ಪ್ರಮಾಣದಲ್ಲಿ ಹಣ ಇರುವ ಬ್ಯಾಂಕ್ ಖಾತೆ ಇನ್ನೂ ಕೂಡ ರದ್ದಾಗಿಲ್ಲ. 

ಜಯಲಲಿತಾ ಅವರ ಪೋಯೆಸ್ ಗಾರ್ಡನ್ ನಿವಾಸ ಹಾಗೂ ಇತರೆ ಎರಡು ಆಸ್ತಿಗಳು  2007 ಅಟ್ಯಾಚ್ ಮೆಂಟ್ ಅಡಿಯಲ್ಲಿ ಬರುತ್ತವೆ. ಅಲ್ಲದೇ ಇವುಗಳು 16 ಕೋಟಿ ಟ್ಯಾಕ್ಸ್ ಅರಿಯರ್ಸ್ ನಡಿ  ಬರುವ ಅವರ ಬ್ಯಾಂಕ್ ಖಾತೆಗೆ ಇನ್ನೂ ಹಣ ರವಾನೆಯಾಗುತ್ತಿದೆ. 

ಕಮರ್ಷಿಯಲ್ ಹಾಗೂ ರೆಸಿಡೆನ್ಸಿಯಲ್ ಆಸ್ತಿಯಿಂದ ರೆಂಟಲ್ ಇಂಕಮ್  ಸ್ವೀಕಾರ ಮಾಡುತ್ತಿರುವುದಾಗಿ ಮಾಹಿತಿ ತಿಳಿದು ಬಂದಿದ್ದು,  ಪ್ರತೀ ತಿಂಗಳೂ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗುತ್ತಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. 

ಡಿಸೆಂಬರ್ 5. 2016ರಲ್ಲಿ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ನಿಧನರಾಗಿದ್ದು, ಅಂದಿನಿಂದಲೂ ಕೂಡ ಜಯಲಲಿತಾ ಖಾತೆಗೆ ಬರುವ ಹಣದ ಪ್ರಮಾಣವು ಹೆಚ್ಚಳವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.  ಆದರೆ ಈ ಖಾತೆಗೆ ಸಂಬಂಧಿಸಿದಂತೆ ಯಾವುದೇ ತೆರಿಗೆಯೂ ಕೂಡ ಪಾವತಿಯಾಗಿಲ್ಲ. 

ಇನ್ನು ಈ ಖಾತೆಯ ಸಂಬಂಧ  ಸಬ್ ರಿಜಿಸ್ಟ್ರಾರ್ ಜೊತೆ ಚರ್ಚೆ ನಡೆಸಿದ್ದು, ಇದರಿಂದ ಆದಾಯ ತೆರಿಗೆ ಪಾವತಿ ಆಗುವವರೆಗೂ ಕೂಡ ಯಾವುದೇ ವ್ಯವಹಾರ ನಡೆಸದಂತೆ ಸೂಚಿಸಿದ್ದಾಗಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.

click me!