ಹೌಡಿ ಮೋದಿಗೂ ಮುನ್ನ ಹೂಸ್ಟನ್‌ನಲ್ಲಿ ಬಿರುಗಾಳಿ ಸಹಿತ ಮಳೆ, ಇಬ್ಬರು ಬಲಿ!

By Web DeskFirst Published Sep 21, 2019, 9:16 AM IST
Highlights

ಹೌಡಿ ಮೋದಿಗೂ ನಡೆವ ಹೂಸ್ಟನ್‌ನಲ್ಲಿ ಬಿರುಗಾಳಿ ಸಹಿತ ಮಳೆ, ಇಬ್ಬರು ಬಲಿ| ಗುರುವಾರ ಉಷ್ಣವಲಯದಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತ ಸೃಷ್ಟಿ

ಹೂಸ್ಟನ್‌[ಸೆ.21]: ಸುಮಾರು ಐವತ್ತು ಸಾವಿರ ಇಂಡೋ-ಅಮೆರಿಕನ್ನರನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾಷಣ ಮಾಡಲಿರುವ ಹೌಡಿ ಮೋದಿ ಕಾರ್ಯಕ್ರಮಕ್ಕೂ ಮುನ್ನ ಇಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ.

ಗುರುವಾರ ಉಷ್ಣವಲಯದಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತ ಸೃಷ್ಟಿಯಾಗಿದ್ದು, ಭಾರಿ ಮಳೆಯಿಂದ ನೆರೆ ಉಂಟಾಗಿದೆ. ಘಟನೆಯಲ್ಲಿ ಇಬ್ಬರು ಮೃತ ಪಟ್ಟಿದ್ದು, ಆಗ್ನೇಯ ಟೆಕ್ಸಾಸ್‌ನಲ್ಲಿ ಮನೆಯಿಂದ ಹೊರ ಬರದಂತೆ ನಾಗರಿಕರಿಗೆ ಮನವಿ ಮಾಡಲಾಗಿದೆ. ಆಗ್ನೇಯ ಟೆಕ್ಸಾಸ್‌ನ 13 ಕೌಂಟಿಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ ಟೆಕ್ಸಾಸ್‌ ಗೌರ್ನರ್‌ ಗ್ರೇಕ್‌ ಅಬಾಟ್‌ ಆಜ್ಞೆ ಹೊರಡಿಸಿದ್ದು, ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದ್ದಾರೆ.

ಇದರ ಹೊರತಾಗಿಯೂ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವ ಬಗ್ಗೆ ಸಂಘಟಕರು ವಿಶ್ವಾಸ ವ್ಯಕ್ತ ಪಡಿಸಿದ್ದು, ಹೂಸ್ಟನ್‌ನ ಎನ್‌ಆರ್‌ಜಿ ಕ್ರೀಡಾಂಗಣ ಭರ್ತಿಯಾÜಲಿದೆ ಎಂದು ಹೇಳಿದ್ದಾರೆ. ಕಾರ್ಯಕ್ರಮದ ಯಶಸ್ವಿಗೆ ದಿನದ 24 ಗಂಟೆಯೂ 1500ರಷ್ಟುಸ್ವಯಂ ಸೇವಕರು ಕಾರ್ಯ ನಿರ್ವಹಿಸುತ್ತಿದ್ದು, ಭಾನುವಾರದಂದು ಅದ್ಭುತ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ್ದಾರೆ.

click me!